Wednesday, August 10, 2022

Latest Posts

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ಚೀನಾ ಸೈನಿಕರ ವಿರುದ್ದ ಹೋರಾಡಿ ಮಡಿದ ಭಾರತೀಯ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ

ಮೈಸೂರು: ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ಚೀನಾ ಸೈನಿಕರ ವಿರುದ್ದ ಹೋರಾಡಿ ಮಡಿದ ಭಾರತೀಯ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭಾರತ ಮಾತೆಗೆ ಜೈಕಾರದ ಘೋಷಣೆ ಕೂಗುತ್ತಾ ಚೀನೀ ನಿರ್ಮಿತ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಆಟಿಕೆಗಳನ್ನು ಪುಡಿಗಟ್ಟಿ ಕಾರ್ಯಕರ್ತರು ಭಾರತೀಯ ಯೋಧರ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ, ಚೀನಾ ಮಾರುಕಟ್ಟೆಯನ್ನು ಬೀಳಿಸುವ ಶಕ್ತಿ ಭಾರತೀಯರಿಗಿದೆ ಎಂಬ ಸಂದೇಶ ರವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ಬಿ.ಎಂ.ರಘು “ಚೀನಾ ಭಾರತವನ್ನು ಕೆಣಕುವ ಮೂಲಕ ದುಸ್ಸಾಹಸಕ್ಕೆ ಕೈ ಹಾಕಿದೆ, ನಮ್ಮ ಒಬ್ಬೊಬ್ಬ ಯೋಧನ ಹತ್ಯೆಗೆ ಪ್ರತೀಕಾರ ತೀರಿಸಬೇಕೆಂದರೆ ಚೀನಾ ನಿರ್ಮಿತ ಯಾವುದೇ ವಸ್ತುವನ್ನು ಕೊಳ್ಳದಿರುವುದು, ಮತ್ತು ಚೀನಾದ ಯಾವುದೇ ಮೊಬೈಲ್ ಅಪ್ಲಿಕೇಶನ್ ಸಹ ಬಳಸದಿರುವುದಾಗಿದೆ, ಸಾಂಕೇತಿಕವಾಗಿ ಇಂದು ಕೆಲ ವಸ್ತುಗಳನ್ನು ರಸ್ತೆಗೊಗೆದು ಪುಡಿಗಟ್ಟಿರುವುದು” ಎಂದು ತಿಳಿಸಿದರು. ಹಾಗು ಇನ್ನು ಮುಂದೆ ಚೀನಾ ವಸ್ತುಗಳನ್ನು ಯಾರು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ. ರಾಜಮಣಿ, ಈರೇಗೌಡ, ಮುಖಂಡರಾದ ರೇವಣ್ಣ, ಸಮೃದ್ಧಿ ಸುರೇಶ್, ಹೇಮ ಗಂಗಪ್ಪ, ಪೂರ್ಣಿಮಾ ಚಂದ್ರಪ್ಪ, ಉಪಾಧ್ಯಕ್ಷರಾದ ವಿಜಯಾ ಮಂಜುನಾಥ್, ಅಮೃತ, ರಾಕೇಶ್ ಭಟ್, ಪ್ರತಾಪ್ ದಟ್ಟಗಳ್ಳಿ, ಕಾರ್ಯದರ್ಶಿ ರಮಾಬಾಯಿ, ಕಾರ್ತಿಕ್ ಗೌಡ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಸ್ಟೀಫನ್ ಸುಜಿತ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭಾಶ್ರೀ, ಹೇಮಂತ್ ಗೌಡ, ಹಿಂದುಳಿದ ವರ್ಗಗಳ ಮೋರ್ಚಾದ ರಾಚಪ್ಪಾಜಿ, ಯುವ ಮೋರ್ಚಾದ ಸಾಗರ್ ಸಿಂಗ್ ರಜಪೂತ್, ಮಹಿಳಾ ಮುಖಂಡರಾದ ಗೀತಾ ಮಹೇಶ್ ,ಎಸ್ತರ್, ಪೂಜಾ, ಪದ್ಮ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss