ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಜೆಪಿ ತೆಕ್ಕೆಗೆ ತಿಪಟೂರು ನಗರಸಭೆ ಆಡಳಿತ: ಪಿ.ಜೆ.ರಾಮಮೋಹನ್ ಅಧ್ಯಕ್ಷರಾಗಿ, ಸೊಪ್ಪು ಗಣೇಶ್ ಉಪಾಧ್ಯಕ್ಷರಾಗಿ ಆಯ್ಕೆ

ತುಮಕೂರು: ತಿಪಟೂರು ನಗರಸಭೆ ಆಡಳಿತ ಬಿಜೆಪಿ ವಶವಾಗಿದೆ.  ಇಂದು ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಪಿ.ಜೆ.ರಾಮಮೋಹನ್ ಅಧ್ಯಕ್ಷರಾಗಿ ಮತ್ತು ಸೊಪ್ಪು ಗಣೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ರಾಮಮೋಹನ್ ಮತ್ತು ಕಾಂಗ್ರೆಸ್ ನ ಮಹೇಶ್ ನಡುವೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸೊಪ್ಪು ಗಣೇಶ್ ಮತ್ತು ಕಾಂಗ್ರೆಸ್ ನ ಮೇಘಶ್ರೀ ಭೂಷಣ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಅಭ್ಯರ್ಥಿಗಳು 22 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ನಗರ ಸಭೆಯ ಸದಸ್ಯಬಲ 31.ಚುನಾವಣೆಯ ನಂತರ ಒಬ್ಬರು ಸಾವನ್ನಪ್ಪಿದ್ದರು. ಇದರಲ್ಲಿ ಬಿಜೆಪಿಯ 20 ಕಾಂಗ್ರೆಸ್ ನ10ಸದಸ್ಯರಿದ್ದರು.ಶಾಸಕರು ಮತ್ತು ಸಂಸದರ ಮತ ಸೇರಿ ಬಿಜೆಪಿ ಸದಸ್ಯರ ಸಂಖ್ಯೆ 22 ಆಗಿತ್ತು. ಶಾಸಕ ಬಿ.ಸಿ.ನಾಗೇಶ್ ಮತ್ತು ಬಿಜೆಪಿ ಮುಖಂಡರಾದ ಲೋಕೇಶ್ವರ ಅವರ ಸಮನ್ವಯತೆ ಯಿಂದ ನಗರಸಭೆ ಬಿಜೆಪಿಯ ವಶವಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss