Friday, July 1, 2022

Latest Posts

ಬಿಜೆಪಿ ನಾಯಕನ ಹತ್ಯೆ: ಪೊಲೀಸ್ ಠಾಣೆ ಎದುರೆ ನಡೆದ ಶೂಟ್ ಔಟ್

ಕೊಲ್ಕತಾ: ಪಶ್ಚಿಮ ಬಂಗಾಳದ ಪಾರ್ಗಣ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಮನೀಷ್ ಶುಕ್ಲಾ ಅವರ ಮೇಲೆ ದಾಳಿ ನಡೆಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಖಂಡಿಸಿದ ರಾಜ್ಯ ಬಿಜೆಪಿ ಬಂಗಾಳದ ಬಾರಖ್ ಪುರದಲ್ಲಿ 12 ಗಂಟೆಗಳ ಬಂದ್ ಮಾಡುಲಾಗುವುದು.

ತಿತಾಘರ್ ಪೊಲೀಸ್ ಠಾಣೆಯ ಎದುರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡು ಹಾರಿಸಿದ್ದು, ಆಸ್ಪತ್ರೆಗೆ ಸ್ಥಳಾಂತರಿಸುವ ಮಾರ್ಗ ಮಧ್ಯೆ ಮನೀಷ್ ಶುಕ್ಲಾ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು, ಟಿತಾಘರ್ ನಲ್ಲಿ ಶಸ್ತ್ರಾಸ್ತ್ರಗಳಿಂದ ಬಿಜೆಪಿ ನಾಯಕನ ಹತ್ಯೆಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದ ಅವಧಿಯಲ್ಲಿ 110ಕ್ಕೂ ಹೆಚ್ಚು ರಾಜ್ಯ ಬಿಜೆಪಿ ನಾಯಕರ ಹತ್ಯೆಯಾಗಿದೆ ಎಂದು ಗುಡುಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss