ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಜೆಪಿ ನಾಯಕಿಯ ಮನೆಗೆ ಕನ್ನ ಹಾಕಿದ ಖದೀಮರು: ಹಣ, ಚಿನ್ನ ಎಲ್ಲವೂ ಗಾಯಬ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಜೆಪಿ ನಾಯಕಿ ಹಾಗೂ ಟಿಕ್ ಟಾಕ್ ಸ್ಟಾರ್ ಆಗಿರುವ ಸೋನಾಲಿ ಫೋಗಾಟ್ ಮನೆಗೆ ಖದೀಮರು ಕನ್ನಹಾಕಿದ್ದಾರೆ.
ಸೋನಾಲಿ ಅವರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ, ಲೈಸೆನ್ಸ್ ರಿವಾಲ್ವರ್, 10 ಲಕ್ಷ ರೂ. ನಗದು ಸೇರಿದಂತೆ ಅನೇಕ ವಸ್ತುಗಳ ಕಳ್ಳತನವಾಗಿದೆ.

ಫೆ.9ರಂದು ಚಂಡೀಗಢಕ್ಕೆ ಪ್ರಯಾಣ ಮಾಡಿದ್ದ ಅವರು ಫೆ.15ರಂದು ವಾಪಾಸ್ ಆಗಿದ್ದಾರೆ. ಈ ವೇಳೆ ಕಳ್ಳರು ಮನೆಯ ಬೀಗಗಳನ್ನು ಮುರಿದು, ಮನೆಯಲ್ಲಿದ್ದ ಚಿನ್ನಾಭರಣ, ಲೈಸೆನ್ಸ್ ರಿವಾಲ್ವರ್, 10 ಲಕ್ಷ ರೂ. ನಗದು ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮನೆಯ ಬಳಿ ಇದ್ದ ಡಿಜಿಟಲ್ ವಿಡಿಯೋ ರೆಕಾರ್ಡರ್ ಗಳನ್ನು ಸಹ ಖದೀಮರು ಕದ್ದೊಯ್ದಿದ್ದಾರೆ ಎಂದು ಸೋನಾಲಿ ಅವರು ಫೋಗಾಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss