Sunday, August 14, 2022

Latest Posts

ಬಿಜೆಪಿ ನಾಯಕಿ ಉಮಾ ಭಾರತಿಗೆ ಕೊರೋನಾ ಸೋಂಕು ದೃಢ

ನವದೆಹಲಿ: ಕೊರೋನಾ ವೈರಸ್ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದ್ದು, ಇದೀಗ ಬಿಜೆಪಿ ನಾಯಕು ಉಮಾ ಭಾರತಿ ಅವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ.  ಈ ಬಗ್ಗೆ ಉಮಾ ಭಾರತಿಯವರೇ ನಿನ್ನೆ ತಡ ರಾತ್ರಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಮಾ ಭಾರತಿಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕಿರುವುದು ಪತ್ತೆಯಾಗಿತ್ತು. ಪ್ರಸ್ತುತ  ಹೃಷಿಕೇಶದಲ್ಲಿದ್ದು, ಇಲ್ಲಿನ ವಂದೇ ಮಾತರಂ ಕುಂಜ್ ನಲ್ಲಿ ಸ್ವಯಂ ಕ್ಲಾರಂಟೈನ್ ಆಗಿದ್ದೇನೆ.

ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕು ದಿನಗಳ ಬಳಿಕ ಮತ್ತೆ ಟೆಸ್ಟ್ ಗೆ ಒಳಪಡುತ್ತೇನೆ. ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss