ಹೊಸದಿಗಂತ ಆನ್ಲೈನ್ ಡೆಸ್ಕ್:
ಬಿಹಾರದ ವಿಧಾನ ಸಭಾ ಚುನಾವಣೆ ಸಹಿತ ೧೦ ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿರುವ ಬೆನ್ನಿಗೇ ಪ್ರಧಾನಿ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಶಂಸಿಸಿದ್ದಾರೆ.
ಮೋದಿ ಹೈ ತೋ ಮುಮ್ಕಿನ್ ಹೈ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕೆ ಜಗತ್ತೇ ತಲೆಬಾಗಿದೆ. ಅವರು ಇದ್ದ ಮೇಲೆ ಗೆಲುವು ಕಟ್ಟಿಟ್ಟ ಬುತ್ತಿ. ಅವರ ಮಾರ್ಗದರ್ಶನದಲ್ಲಿ ಬಿಹಾರ ಚುನಾವಣೆ ಮತ್ತು ಭಾರತದಾದ್ಯಂತ ನಡೆದ ಉಪಚುನಾವಣೆಗಳಲ್ಲಿ ಪಕ್ಷ ಅಸಾಧಾರಣ ಪ್ರದರ್ಶನ ಕೊಟ್ಟಿದೆ. ಇದು ಅವರಿಂದ ಮಾತ್ರವೇ ಸಾಧ್ಯ ಎಂದು ಯೋಗಿ ಅವರು ಹೇಳಿದ್ದಾರೆ.