Wednesday, August 10, 2022

Latest Posts

ಬಿಜೆಪಿ ಯುವ ಮೋರ್ಚಾದಿಂದ ಕಲಬುರಗಿಯಲ್ಲಿ ವಾಕ್ ಥಾನ್

ಹೊಸ ದಿಗಂತ ವರದಿ, ಕಲಬುರಗಿ:

ರಾಜ್ಯ ಬಿಜೆಪಿ ಯುವ ಮೋರ್ಚಾ ಆದೇಶದಂತೆ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನದ ನಿಮಿತ್ತ ಕಲಬುರಗಿ ನಗರ ಜಿಲ್ಲಾ
ಬಿಜೆಪಿ ಯುವ ಮೋರ್ಚಾ ವತಿಯಿಂದ ಸಮರ್ಥ ಭಾರತ ಟ್ರಸ್ಟ್ ಅಡಿಯಲ್ಲಿ ನಗರದ ಪ್ರಸಿದ್ದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಆನಂದ ಹೋಟೆಲ್ ವರಗೂ ವಾಕ್ ಥಾನ್ ನಡೆಸಲಾಯಿತು.
ಯುವಕರನ್ನು ಉದ್ದೇಶಿಸಿ ನೂತನ ವಿದ್ಯಾಲಯದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕಮಲನಾಥ ಓಂಕಾರ ಮಾತನಾಡಿ, ವಿವೇಕಾನಂದರ ಹಲವು ವಿಚಾರಗಳು ಇಂದಿನ ಯುವಕರಿಗೆ ಸ್ಪೂರ್ತಿ ಎಂದರು. ಅವರ ಜೀವನ ಶೈಲಿ, ಧರ್ಮದ ಪ್ರೇಮ, ಪ್ರತಿಯೊಂದು ಹಂತದಲ್ಲಿಯೂ ಅವರ ಮೇರು ವ್ಯಕ್ತಿತ್ವ ಎಂದರು.
ಈ ಸಂದರ್ಭದಲ್ಲಿ ಯುವ ಮೋರ್ಚಾದ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಪ್ರದಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ದಕ್ಷಿಣ ಮಂಡಲದ ಅಧ್ಯಕ್ಷ ರಾಮಚಂದ್ರ ಗುಮ್ಮಟ, ರಾಜು ಚವ್ಹಾಣ, ಮಹೇಶ ಚವ್ಹಾಣ, ಸುನೀಲ ಮಹಾಗಾಂವಕರ್, ಸಚೀನ ಬನ್ನಿ, ಪರಮೇಶ್ವರ ಏಳಮೇಲಿ, ಮಹೇಶ ಹರವಾಳ, ದಯಾನಂದ ಪಾಟೀಲ, ಮಹಾಂತೇಶ, ವಿರೇಶ ನೀಲಾ, ಪೀರಶೆಟ್ಟಿ ಸೋಮಾ, ದಿನೇಶ ಕುಲಕರ್ಣಿ. ಸಿದ್ದು ಕುಸನೂರ, ಶಿವು ತೋಳನೂರ, ಶರಣು ಅವರಾದಿ, ಸೌರಭ, ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss