Sunday, August 14, 2022

Latest Posts

ಪ್ಲಾಸ್ಮಾ ದಾನ ಮಾಡಿಸುವ ಮೂಲಕ ಕೊರೋನಾ ರೋಗಿಗಳ ಉಳಿಸುವ ಕೆಲಸ ಬಿಜೆಪಿ ಯುವ ಮೋರ್ಚಾದಿಂದಾಗಲಿ

ಮೈಸೂರು: ಮಹಾಮಾರಿ ಕೊರೋನಾ ಸೋಂಕಿನಿoದ ಗುಣ ಹೊಂದಿರುವವರಿoದ ಪ್ಲಾಸ್ಮ ದಾನ ಮಾಡಿಸುವ ಮೂಲಕ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತ ರೋಗಿಗಳ ಜೀವ ಉಳಿಸುವ ಕೆಲಸವನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಮುಖಂಡರು ಮಾಡಬೇಕು ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಮೈಸೂರು ನಗರ ಯುವಮೋರ್ಚಾ ಹಾಗೂ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ – 18 ರ ವ್ಯಾಪ್ತಿಗೆ ಬರುವ ನ್ಯೂ ಬಂಬೂ ಬಜಾರ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿವಿಧೆಡೆ ಸೇವಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕೊರೋನಾ ಎಂಬ ಮಾಹಮಾರಿ ರೋಗದ ಈ ಸಂದರ್ಭದಲ್ಲಿ ತಮ್ಮ ರಕ್ತ ದಾನ ಮಾಡಿ, ರೋಗಿಗಳಿಗತೆ ನೇರವಾಗಬೇಕು. ಅಲ್ಲದೆ ಕೊರೋನಾ ಸೋಂಕಿನಿoದ ಗುಣವಾದವರಲ್ಲಿ ಪಾಸ್ಮ ದಾನ ಮಾಡುವವವರನ್ನು ಪಟ್ಟಿ ಮಾಡಿ, ಅವರನ್ನು ಕರೆತಂದು ರಕ್ತದಾನ ಮಾಡಿಸುವ ಮೂಲಕ ಕೊರೋನಾ ಪಿಡಿತರ ಜೀವ ಉಳಿಸುವ ಕಾರ್ಯಕ್ಕೆ ಯುವರ್ಮೋರ್ಚಾ ಮುಂದಾಗಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಆಭಿಯಾನದಡಿ ಡ್ರಗ್ಸ್ ಮುಕ್ತ ಮೈಸೂರು ಮಾಡಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ಮೈಸೂರು ನಗರದ ಯುವಮೋರ್ಚಾ ಅಧ್ಯಕ್ಷ ಎಂ ಜೆ ಕಿರಣ್‌ಗೌಡ, ಚಾಮರಾಜ ಅಧ್ಯಕ್ಷ ಸಚಿನ್, ನಗರ ಪದಾಧಿಕಾರಿಗಳಾದ ಸಂದಿಪ್, ಕಿರಣ್, ಆನಂದ, ಕಾರ್ತಿಕ್, ಹರ್ಷ, ರಾಕೇಶ್, ಆಭಿ, ಯೋಗೆಶ್, ಸಂಚಾಲಕ ನಿತೀನ್, ಎನ್.ಆರ್ ಕ್ಷೇತ್ರದ ಅಧ್ಯಕ್ಷ ಲೋಹಿತ್, ಹೇಮಂತ್ ಗೌಡ, ಪ್ರಧಾನ ಕಾರ್ಯದರ್ಶಿ ಅರ್ಜನ್, ಉಪಾಧ್ಯಕ್ಷರಾದ ಶಿವು, ರಾಕೇಶ್, ಚಿಕ್ಕ ವೆಂಕಟು ಮತ್ತಿತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss