Tuesday, July 5, 2022

Latest Posts

ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ

ಶಿವಮೊಗ್ಗ: ನಗರದಲ್ಲಿ ಉಂಟಾಗಿರುವ ತುರ್ತು ರಕ್ತದ ಅಭಾವವನ್ನು ಮನಗಂಡು ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ರಕ್ತದಾನ ಶಿಬಿರ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸೋಮವಾರ ನಡೆಯಿತು. ರಕ್ತದಾನ ಮಾಡಿದ ಕಾರ್ಯಕರ್ತರಿಗೆ ಸಂಸದ ಬಿ.ವೈ ರಾಘವೇಂದ್ರ ಪ್ರಮಾಣಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಕುಮಾರ್, ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ. ಕಾಂತೇಶ್, ನಗರ ಬಿಜೆಪಿ ಅಧ್ಯಕ್ಷರಾದ ಜಗದೀಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳ್ಳೇಕೆರೆ ಹಾಗೂ ನಗರ ಯುವ ಮೋರ್ಚಾ ಅಧ್ಯಕ್ಷ ಆರ್.ವಿ. ದರ್ಶನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹೊನ್ನಪ್ಪ, ಸುಹಾಸ್ ಶಾಸ್ತ್ರಿ, ಶರತ್ ಕಲ್ಯಾಣಿ, ವಿನಯ್ ಚೌಡಿಕೆ, ಶ್ರೀನಾಗ್, ಜಗನ್ನಾಥ್,ಗಣೇಶ್ ಬಿಳಕಿ, ದಿನೇಶ್ ಆಚಾರ್ಯ, ಪ್ರದೀಪ್ ಕವಾಡ್, ಮೋಹನ್ ಎಂ.ಎಂ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss