Sunday, June 26, 2022

Latest Posts

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕಡಲ ನಗರಿ ಮಂಗಳೂರು ಸಜ್ಜು!

ಮಂಗಳೂರು: ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನ.5ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕಡಲ ನಗರಿ ಮಂಗಳೂರು ಸಜ್ಜುಗೊಳ್ಳುತ್ತಿದೆ.
ಕಾರ್ಯಕಾರಿಣಿ ಸಭೆ ನಡೆಯುವ ಸಭಾಂಗಣ ಮತ್ತು ಕೋರ್ ಕಮಿಟಿ ಸಭೆ ನಡೆಯುವ ಹೊಟೇಲ್ ಓಷಿಯನ್ ಪರ್ಲ್ ಸಹಿತ ನಗರದ ವಿವಿಧ ಕಡೆ ಕಾರ್ಯಕಾರಣಿಗೆ ಆಗಮಿಸುವ ಗಣ್ಯರಿಗೆ ಸ್ವಾಗತ ಕೋರುವ ಫಲಕ ಅಳವಡಿಸಲಾಗಿದೆ.
ನಗರದ ಪಂಪ್‌ವೆಲ್ ವೃತ್ತದಿಂದ ಕಂಕನಾಡಿ, ಅಂಬೇಡ್ಕರ್ ವೃತ್ತ, ಪಿವಿಎಸ್‌ನಿಂದ ಲಾಲ್‌ಭಾಗ್‌ವರೆಗೆ ಹಾಗೂ ನಗರದ ವಿವಿಧ ಕಡೆ ಬಿಜೆಪಿಯ ಧ್ವಜ, ಕೇಸರಿ, ಹಸಿರು ಬಣ್ಣದ ಬಂಟಿಂಗ್ಸ್, ಕಟೌಟ್‌ಗಳ ಮೂಲಕ ಸಿಂಗರಿಸಲಾಗಿದೆ.
ಕಾರ್ಯಕಾರಿಣಿ ಸಭೆ ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆಸಲು ಬಿಜೆಪಿ ದ.ಕ. ಜಿಲ್ಲಾ ಘಟಕ ನೇತೃತ್ವದಲ್ಲಿ ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದು, ಸೋಮವಾರ ನಗರ ಅಲಂಕಾರದಲ್ಲಿ ತೊಡಗಿದ್ದರು.
ಸಭೆಯಲ್ಲಿ ಭಾಗವಹಿಸುವ ಪಕ್ಷದ ಪ್ರಮುಖರು, ಗಣ್ಯರ ಸ್ವಾಗತ ಹಾಗೂ ವಸತಿ ವ್ಯವಸ್ಥೆಗೆ ಈಗಾಗಲೇ 16 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಸಭೆಗೆ ಬೇಕಾದ ಎಲ್ಲ ಸಿದ್ದತೆ ಅಂತಿಮಗೊಳಿಸಲು ಕಾರ್ಯಕರ್ತರ ತಂಡ ಕೆಲಸ ಮಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss