Monday, August 15, 2022

Latest Posts

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಗುರುಲಿಂಗನಗೌಡ ನೇಮಕ

ಬಳ್ಳಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಗುರುಲಿಂಗನಗೌಡ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಬಿಜೆಪಿ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷರಾಗಿ ಕೆಲಸ‌ ನಿರ್ವಹಿಸಿ ಪಕ್ಷದ ಎಲ್ಲರ ಮೆಚ್ಚುಗೆ ‌ಪಡೆದಿದ್ದರು. ಅವಧಿಯಲ್ಲಿ ರೈತರ ಪರವಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿ ಜನ‌ಮನ್ನಣೆ ಪಡೆದಿದ್ದರು. ಇದರ ಜೊತೆಗೆ ತಳಮಟ್ಟದಿಂದ ಪಕ್ಷವನ್ನು‌ ಸಂಘಟಿಸುವಲ್ಲಿ ಶ್ರಮಿಸಿ ಎಲ್ಲರ ಗಮನಸೆಳೆದಿದ್ದರು. ಅವರ ಕಾರ್ಯಕ್ಷಮತೆಯನ್ನು ಗಮನಿಸಿದ ಪಕ್ಷದ ವರಿಷ್ಠರು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ‌ ನೇಮಕ ಮಾಡಿ‌ ಹೆಚ್ಚಿನ ಜವಾಬ್ದಾರಿ ‌ವಹಿಸಿದ್ದಾರೆ. ಆಯ್ಕೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss