Friday, July 1, 2022

Latest Posts

ಬಿಜೆಪಿ ವಿಶೇಷ ಸಭೆ: ಬಿಜೆಪಿ ರಾಜ್ಯ ನಾಯಕರಿಗೆ ಶಿವಮೊಗ್ಗದಲ್ಲಿ ಭವ್ಯ ಸ್ವಾಗತ

ಹೊಸದಿಗಂತ ವರದಿ,ಶಿವಮೊಗ್ಗ:

ನಗರದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಬಿಜೆಪಿ ವಿಶೇಷ ಸಭೆಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಹೆಲಿಪ್ಯಾಡ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಮಲೆನಾಡಿನ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ ಡೊಳ್ಳು ಕುಣಿತದ ಮೂಲಕ ಮೂವರೂ ಗಣ್ಯರಿಗೆ ಸ್ವಾಗತ ಕೋರಲಾಯಿತು. ಇದರೊಂದಿಗೆ ಚಂಡೆ ವಾದ್ಯ ತಂಡ ಕೂಡ ಸಾಥ್ ನೀಡಿತು. ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮೂವರೂ ಹೆಲಿಪ್ಯಾಡ್‌ನಿಂದ ಸಾಗರ ರಸ್ತೆವರೆಗೆ ಮೆರವಣಿಗೆಯಲ್ಲೇ ಆಗಮಿಸಿದರು. ನೂರಾರು ಕಾರ್ಯಕರ್ತರು ಜಯಘೋಷಗಳನ್ನು ಕೂಗಿದರು.

ಸಂಸದ ರಾಘವೇಂದ್ರ, ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧ್ಯಕ್ಷ ಮೇಘರಾಜ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಸಹಿತ ಹಲವಾರು ಪ್ರಮುಖರು ಹಾಜರಿದ್ದು ಸ್ವಾಗತ ಕೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss