Thursday, August 11, 2022

Latest Posts

ಬಿಜೆಪಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ: ಸಿಬಿಐ ಅಧಿಕಾರಿಗಳಿಂದ ಡಿವೈಎಸ್ಪಿ ಸುಲ್ಫಿ, ಕರ್ಜಗಿ ವಿಚಾರಣೆ

ಧಾರವಾಡ: ಜಿಲ್ಲಾ ಪಂಚಾಯಿತಿ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಚುರುಕೊಳಿಸಿರುವ ಸಿಬಿಐ ಅಧಿಕಾರಿಗಳು ಕೊಲೆ ಪ್ರಕರಣಕ್ಕೆ ಸಂಬಧಿಸಿದ೦ತೆ ಶನಿವಾರ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ಕೊರೋನಾ ಹಾವಳಿಯ ನಡೆವೆಯೂ ಸಹ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಮನೋಜ ಕರ್ಜಗಿ ಅವರನ್ನು ಉಪನಗರ ಠಾಣೆಗೆ ಕರೆಸಿದ ಸಿಬಿಐ ಅಧಿಕಾರಿಗಳು ಹತ್ತು-ಹಲವು ಸುತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.
2016ರಲ್ಲಿ ಸಪ್ತಾಪೂರದ ಉದಯ ಜೀಮ್‌ನಲ್ಲಿ ಬೆಳಂಬೆಳಿಗ್ಗೆ ಯೋಗೇಶಗೌಡ ಗೌಡ ಕೊಲೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಉಪನಗರ ಠಾಣೆ ಪೊಲೀಸರು ಎಂಟು ಜನರÀನ್ನು ಬಂಧಿಸಿದ್ದರು. ಆದರೆ, ಕೊಲೆ ಮಾಡಿದ ಆರೋಪಿಗಳು ಬೇರೆ ಇದ್ದಾರೆಂಬ ಆರೋಪ ಕೇಳಿಬಂದಿತು. ಈ ಹಿನ್ನಲೆ ಯೋಗೇಶಗೌಡರ ಸಹೋದರ ಹಾಗೂ ತಾಯಿ ನಿಂಗಮ್ಮ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಸರ್ಕಾರ ಪ್ರಕರಣ ಸಿಬಿಐ ತನಿಖೆ ಹಸ್ತಾಂತರಿಸಿದ ನಂತರ ಸಿಬಿಐ ಅಧಿಕಾರಿಗಳು ಎಂಟು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಗುರುನಾಥಗೌಡ ಗೌಡರ ನಡುವೆ ರಾಜಿಸಂಧಾನ ಮಾಡಿಕೊಳ್ಳಲು ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಮನೋಜ ಕರ್ಜಗಿ ಅವರನ್ನು ಕಳಸಿದ್ದರು ಎಂಬ ಆರೋಪದ ಮೇರೆಗೆ ಈ ಇಬ್ಬರು ವ್ಯಕ್ತಿಗಳನ್ನು ಬೆಳಿಗ್ಗೆಯಿಂದ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬ೦ಧಿಸಿದ೦ತೆ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವ ಸಿಬಿಐ ಅಧಿಕಾರಿಗಳು ಇನ್ನೂ ಯಾವ್ಯಾವ ಅಧಿಕಾರಿಗಳನ್ನು ಹಾಗೂ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬುದು ಕಾದುನೋಡಬೇಕಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss