ಹೊಸದಿಲ್ಲಿ: ಲಡಾಖ್ ಸಂಸದ ಜಾಮ್ಯಾಂಗ್ ತ್ಸೆರಿಂಗ್ ನಾಮ್ಗ್ಯಾಲ್ ಕನ್ನಡ ಕಲಿಕೆ ಬಗ್ಗೆ ಆಸಕ್ತಿ ತೋರಿಸಿದ್ದು, ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಅವರಿಂದ ಕನ್ನಡ ಕಲಿತಿದ್ದಾರೆ. ಅಲ್ಲದೆ, ಕಲಿತ ಮೊದಲ ಪದದಲ್ಲೇ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರನ್ನು ಬಿಜೆಪಿ ಸೇರಿಕೊಳ್ಳಿ ಎಂದು ಕನ್ನಡದಲ್ಲಿ ಆಹ್ವಾನಿಸಿದ್ದಾರೆ.
ಈ ಸಂಬಂಧಿಸಿದಂತೆ ಜಾಮ್ಯಾಂಗ್ ಟ್ವೀಟ್ ಮಾಡಿದ್ದು, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಹಾಗೂ ಡಿ.ಕೆ. ಸುರೇಶ್ ಅವರ ಜತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಶೀರ್ಷಿಕೆಯಲ್ಲಿ ಮೂವರು ಕನ್ನಡಿಗರು ನನಗೆ ಕನ್ನಡ ಕಲಿಸಲು ಪ್ರಯತ್ನಿಸಿದ್ದಾರೆ. ಹಾಗಾಗಿ ನಾನು ಕನ್ನಡದಲ್ಲಿಯೇ ಕಾಂಗ್ರೆಸ್ ನಾಯಕ ಸುರೇಶ್ ಕುಮಾರ್ ಅವರಿಗೆ ಬಿಜೆಪಿ ಸೇರಿಕೊಳ್ಳಿ ಎಂದಿದ್ದೇನೆ ಎಂದು ಟ್ವೀಟ್ ಮಾಡಿ, ಹಾಸ್ಯಮಯ ಸಮಯ ಎಂದು ಹೇಳಿಕೊಂಡಿದ್ದಾರೆ.
ತ್ಸೆರಿಂಗ್, ನೂತನವಾಗಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಲಡಾಖ್ನ ಸಂಸದರಾಗಿದ್ದು, ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಸಿದಾಗ ಸರ್ಕಾರದ ಪರ ಸಂಸತ್ನಲ್ಲಿ ಬ್ಯಾಟಿಂಗ್ ಮಾಡಿ ಜನಮನ್ನಣೆ ಗಳಿಸಿದ್ದರು. ಈ ಅವರ ಕನ್ನಡ ಕಲಿಕೆಯ ಟ್ವೀಟ್ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.