ಮಂಗಳೂರು: ಬಿಟ್ಟಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಭರ್ಜರಿಯಾಗಿಯೇ ಬಿಸಿಮುಟ್ಟಿಸಿದೆ.
ಮಂಗಳೂರು – ಕಣ್ಣೂರು, ಮಲಬಾರ್ ಎಕ್ಸ್ಪ್ರೆಸ್, ತಿರುವನಂತಪುರ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳಲ್ಲಿ ದಿಢೀರ್ ತಪಾಸಣೆ ನಡೆಸಿರುವ ಅಧಿಕಾರಿಗಳು ಸುಮಾರು 2.5 ಲಕ್ಷ ರೂ. ಗಳಿಗೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.
ರೈಲ್ವೇ ಟಿಕೆಟ್ ತಪಾಸಣ ಅಧಿಕಾರಿಗಳು ಮಂಗಳೂರು – ಕಣ್ಣೂರು ನಡುವಣ ಪ್ರಯಾಣಿಕರಿಗೆ ಸಂಬಂಧಿಸಿ ದಿಢೀರ್ ತಪಾಸಣೆ ನಡೆಸಿ 661 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ 2,12,690 ರೂ. ದಂಡ ವಸೂಲಿ ಮಾಡಿದ್ದಾರೆ. ಮಲಬಾರ್ ಎಕ್ಸ್ಪ್ರೆಸ್, ತಿರುವನಂತಪುರ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿಯೇ 218 ಪ್ರಕರಣಗಳು ಪತ್ತೆಯಾಗಿದ್ದು, 67,445 ರೂ. ದಂಡ ವಸೂಲಿಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.