Friday, January 22, 2021

Latest Posts

ಬಿಟ್ಟುಬಿಡದೆ ಕಾಡುವ ತಲೆ ನೋವಿಗೆ ಇಲ್ಲಿದೆ ಸಿಂಪಲ್ ಮನೆಮದ್ದುಗಳು..!

ಕೆಲಸಗಳು ಹೆಚ್ಚಾಗುತ್ತಿದಂತೆಯೇ ನಮಗೆ ಒತ್ತಡವೂ ಹೆಚ್ಚಾಗುತ್ತದೆ ಇದರಿಂದ ತಲೆ ನೋವು ಕಾಡುತ್ತದೆ. ಕೆಲವರಿಗೆ ದಿನವಿಡೀ ಈ ತಲೆ ನೋವು ಕಾಡಿದರೆ ಮತ್ತೆ ಕೆಲವರಿಗೆ ಪ್ರತಿ ದಿನ ತಲೆ ನೋವು ಸಮಸ್ಯೆ ಇರುತ್ತದೆ. ಆದರೆ ಈ ತಲೆ ನೋವು ನಿವಾರಣೆಗೆ ಇಲ್ಲಿದೆ ಸಿಂಪಲ್ ಮನೆಮದ್ದುಗಳು:

ಲೈಟ್ ಡಿಮ್ ಮಾಡಿ: ಹೆಚ್ಚು ಬೆಳಕಿರುವ ಲೈಟ್ ಗಳನ್ನು ನಂದಿಸಿ ಸ್ವಲ್ಪ ಹೊತ್ತು ಕತ್ತಲೆಯಲ್ಲಿ ಇರುವುದರಿಂದ ತಲೆ ನೋವು ನಿವಾರಣೆಯಾಗುತ್ತದೆ.

ಶಬ್ಧ ಬೇಡ: ತಲೆ ನೋವಿನಲ್ಲಿದ್ದಾಗ ಕಿರಿಕಿರಿಯಾಗುವಂತಹ ಟಿವಿ, ಮೊಬೈಲ್, ಹಾಡುಗಳನ್ನು ಕೇಳಬೇಡಿ. ಅತಿಯಾದ ಶಬ್ದವೂ ತಲೆ ನೋವಿಗೆ ಕಾರಣವಾಗಲಿದೆ.

ನಿದ್ದೆ ಮಾಡಿ: ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇದ್ದರೆ ದಿನವಿಡೀ ನಿದ್ದೆ ಹಾಗೂ ತಲೆ ನೋವಿನಿಂದ ಬಳಲಬೇಕಾಗುತ್ತದೆ. ಈ ವೇಳೆ ನಿಮ್ಮ ಕೆಲಸದೊತ್ತಡಗಳ ನಡುವೆ ಕೆಲವು ಕಾಲ ವಿಶ್ರಾಂತಿ ಪಡೆಯುವುದು ಉತ್ತಮ.

ಮಸಾಜ್ ಮಾಡಿಕೊಳ್ಳಿ: ತಲೆ ನೋವು ಸಮಸ್ಯೆಯಿಂದ ಬಳಲುತ್ತಿರುವಾಗ ತಲೆ, ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ತಲೆ ನೋವು ದೂರಾಗುತ್ತದೆ.

ಕಾಫಿ ಕುಡಿಯಿರಿ: ಕಾಫಿಯಲ್ಲಿರುವ ಕಫೇನ್ ಅಂಶವು ತಲೆ ನೋವು ದೂರ ಮಾಡಲು ಸಹಾಯ ಮಾಡುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!