Tuesday, June 28, 2022

Latest Posts

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆ

ಹೊಸ ದಿಗಂತ ವರದಿ ಬಳ್ಳಾರಿ:

ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ನ ಅಧ್ಯಕ್ಷರಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿವರೆಗೆ ಆಧ್ಯಕ್ಷರಾಗಿದ್ದ ಟಿ.ಎಂ.ಚಂದ್ರಶೇಖರಯ್ಯ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ತಹಶೀಲ್ದಾರ್ ವಿಶ್ವನಾಥ ಅವರು, ಆನಂದ್ ಸಿಂಗ್ ಒಬ್ಬರೇ ನಾಮಪತ್ರ ಸಲ್ಲಿಸಿದ‌ ಹಿನ್ನೆಲೆ ಆನಂದ್ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ನಾಮಪತ್ರ ಸಲ್ಲಿಸಿದ ವೇಳೆ ಬ್ಯಾಂಕಿನ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ, ವೃಷಬೇಂದ್ರ ಸ್ವಾಮಿ ಮತ್ತಿತರ ನಿರ್ದೇಶಕರು ಇದ್ದರು.

ಈ ಬ್ಯಾಂಕ್ ಗೆ ಬಿಜೆಪಿ ಪಕ್ಷ ಬೆಂಬಲಿತರಾಗಿ ಆಯ್ಕೆಗೊಂಡ ಮೊದಲ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿರುವ ಗುಂಡುಮುಣುಗು ತಿಪ್ಪೇಸ್ವಾಮಿ ಸೇರಿದಂತೆ ಉಳಿದ ನಿರ್ದೇಶಕರೆಲ್ಲ ಕಾಂಗ್ರೆಸ್ ಪಕ್ಷ ಬೆಂಬಲಿತರಾಗಿದ್ದಾರೆ.

ಸಚಿವ ಆನಂದ್ ಸಿಂಗ್ ಸುದ್ದಿಗಾರರೊಂದಿಗೆ ‌ಮಾತನಾಡಿ, ಸೋಮವಾರ ಜಿಲ್ಲೆ ಘೋಷಣೆ ಆಯ್ತು, ಇವತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದೇನೆ, ಪದೇ ಪದೇ ಖಾತೆ ಬದಲಾವಣೆಯಿಂದ ಬೇಸರವಾಗಿರಲಿಲ್ಲ.

ರಾಜಕೀಯದಲ್ಲಿ ಏಳು ಬೀಳು ಸಹಜ. ಹಿನ್ನಡೆಯನ್ನು ಆಘಾತವೆಂದು ಕೊಂಡಿರಲಿಲ್ಲ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಆ ಪಂಪಾ ವಿರೂಪಾಕ್ಷನ ಅಶೀರ್ವಾದವಿದೆ ಎಂದು ಕೊಂಡಿರುವೆ ಎಂದರು.
ರೈತರು ಬೆನ್ನುಲಬು ಎಂದು ಎಲ್ಲರೂ ಹೇಳ್ತಾರೆ. ಇಡೀ ದೇಶದಲ್ಲಿ ರೈತರಿಗೆ ಅನ್ಯಾವಾಗಿದೆ ಎಂದು ಹೋರಾಟ ನಡೆಯುತ್ತಿದೆ.‌

ಇಷ್ಟೊಂದು ವಿರೋಧದ ಮಧ್ಯೆ ಕಾಯ್ದೆ ಜಾರಿಯಾಗ್ತಿದೆ. ಪ್ರಧಾನಿ‌ ಮೋದಿ‌ ಜೀ ಅವರ ನಿಲುವು ಸರಿ ಇದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ರೈತರಿಗೆ ಒಳ್ಳೆಯದಾಗಲಿದೆ ಎಂದೇ ಮೋದಿ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಜಕೀಯ ಪಕ್ಷಗಳು ಅಮಾಯಕ ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ.‌ ಇಷ್ಟೊಂದು ವಿರೋಧದ ಮಧ್ಯೆ ಕಾಯ್ದೆ ಜಾರಿ ಮಾಡಿ ಚುನಾವಣೆಗೆ ಹೋಗೋದು ಕಷ್ಟವಾಗ್ತದೆ ಎಂದು ಹಿಂದೆ ಸರಿಯಬಹುದಿತ್ತು. ಆದರೆ,
ಮೋದಿ ಅವರು ಕಾಯ್ದೆ ಹಿಂದೆ ಒಳ್ಳೆಯ ಉದ್ದೇಶ ಇದೆ ಎಂದು ಹಿಂದೆ ಸರಿಯುತ್ತಿಲ್ಲ ಎಂದರು.
ನೂರು ವರ್ಷದ ಇತಿಹಾಸ ಇರೋ ಬಿಡಿಸಿಸಿ ಬ್ಯಾಂಕ್ ಗೆ ಅಧ್ಯಕ್ಷರಾಗೋ ಅವಕಾಶ ಕೂಡಿ ಬಂದಿದೆ. ಬ್ಯಾಂಕಿನ ಮೂಲಕ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿರುವೆ. ಈ ಮೂಲಕ ರೈತ ಸಮೂಹದ ಅಭಿವೃದ್ಧಿಗೆ ದುಡಿಯುವೆ ಅದಕ್ಕಾಗಿ ‌ಬ್ಯಾಂಕ್ ನ ಎಲ್ಲ ನಿರ್ದೇಶಕದ ಸಹಕಾರ ಅಗತ್ಯ ಎಂದರು. ಚಂದ್ರಶೇಖರಯ್ಯ ಸ್ವಾಮಿ, ಸಚಿವರ ಆಪ್ತರಾದ ಮುನ್ನಾ ಭಾಯಿ, ಸಂದೀಪ್ ಸಿಂಗ್, ಮುನಿರಾಜು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss