2018ರಲ್ಲಿ ಮೊದಲ ಸೀಸನ್ ಬಿಡುಗಡೆಯಾಗಿದ್ದ ಬ್ರೀಥ್ ವೆಬ್ ಸೀರಿಸ್ ಇದೀಗ ಹೊಸ ಕತೆ, ಪಾತ್ರದೊಂದಿಗೆ ಎರಡನೇ ಸೀಸನ್ ಬಿಡುಗಡೆಯಾಗಲು ರೆಡಿಯಾಗಿದ್ದು ಸಸ್ಪೆನ್ಸ್ ಥ್ರಿಲ್ಲರ್ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಚೊಚ್ಚಲ ಬಾರಿ ಅಭಿಷೇಕ್ ಬಚ್ಚನ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದು ‘ಬ್ರೀಥ್ : ಇನ್ ಟು ಶ್ಯಾಡೋಸ್ ‘ ನ ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ಮೊದಲ ಸೀಸನ್ ನಲ್ಲಿರುವಂತೆ ಇಲ್ಲಿ ತಂದೆಯೊಬ್ಬ ಕಾಣೆಯಾದ ತನ್ನ ಮಗಳ ಹುಡುಕಾಟದಲ್ಲಿ ಸವಾಲುಗಳನ್ನು ಬೇಧಿಸುವುದು ಈ ಸೀಸನ್ ನಲ್ಲಿ ಇನ್ನಷ್ಟು ರೋಚಕವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ತನ್ನ ಮಗಳು ಸೀಯಾ ಕಾಣೆಯಾಗುತ್ತಾಳೆ, ಹುಡುಕಾಟಕ್ಕೆ ವಿಶೇಷ ತನಿಖಾ ತಂಡವೂ ಇರುತ್ತದೆ, ಮುಖವಾಡವನ್ನು ತೊಟ್ಟಿರುವ ಅಪರಿಚಿತನೊಬ್ಬನ ಹಿಂದೆ ಸಾಗುವ ಟ್ರೈಲರ್ ನೋಡಲು ಥ್ರಿಲ್ಲರ್ ಹಾಗೆ ಕಾಣುತ್ತಿದೆ.
ತಂದೆಯೊಬ್ಬ ಮಗಳನ್ನು ಉಳಿಸುವ ಅಪ್ಪನ ಜವಬ್ದಾರಿ ನಿಭಾಯಿಸಬೇಕಾ ಅಥವಾ ಕೊಲೆಗಾರನಾಗಬೇಕಾ? ಇದು ಬ್ರೀಥ್ ಸೀರೀಸ್ ಸುತ್ತ ಸಾಗುವ ಪ್ರಶ್ನೆ. ಮಗಳ ಹುಡುಕಾಟಕ್ಕೆ ತಂದೆ ತನಿಖೆಯಲ್ಲಿ ತೊಡಗಿಕೊಳ್ಳುತ್ತಾರ? ಮಗಳನ್ನು ಪತ್ತೆ ಹಚ್ಚಿ ಅಡಗಿರುವ ರಹಸ್ಯವನ್ನು ಬಯಲಿಗೆ ಎಳೆಯುತ್ತಾರ? ಹೀಗೆ ಟ್ರೈಲರ್ ಕೂತುಹಲದ ಪ್ರಶ್ನೆಗಳನ್ನು ವೀಕ್ಷಕರ ಮನಸ್ಸಿನಲ್ಲಿ ಬಿಟ್ಟು ಹೋಗುತ್ತದೆ.
ಅಂದ ಹಾಗೆ ಬ್ರೀಥ್ ಸೀಸನ್ -2 ನಲ್ಲಿ ಅಭಿಷೇಕ್ ಬಚ್ಚನ್ ಜೊತೆ ನಿತ್ಯಾ ಮೆನನ್,ಅಮೀತ್ ಸಾಧ್ ಹಾಗೂ ಇತರ ಪ್ರಮುಖ ಕಲಾವಿದರು ಕಾಣಿಸಿಕೊಳ್ಳಿದ್ದಾರೆ. ಬ್ರೀಥ್ ಸೀಸನ್ -2 ಜುಲೈ 10 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಪ್ರಾರಂಭಗೊಳ್ಳಲಿದೆ.
ಬ್ರೀಥ್ ಮೊದಲ ಸೀಸನ್ ನಲ್ಲಿ ನಟ ಮಾಧವನ್ ಕಾಣಿಸಿಕೊಂಡಿದ್ದರು. ತಂದೆ ಮಗನ ಕಥೆ ಬಹಳ ಜನಪ್ರಿಯವಾಗಿತ್ತು.ಇದೀಗ ಎರಡನೇ ಸೀಸನ್ ಶುರು ಆಗ್ತಾ ಇದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ.