Monday, September 28, 2020
Monday, September 28, 2020

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಬಿಡುವು ನೀಡಿದ ಆಶ್ಲೇಷಾ ಮಳೆ: ಸಹಜ ಸ್ಥಿತಿಯತ್ತ ಕೊಡಗಿನ ಜನಜೀವನ!

ಮಡಿಕೇರಿ : ಜಿಲ್ಲೆಯಲ್ಲಿ ಕಳೆದ ವಾರದಿಂದ ಎಡಬಿಡದೆ ಧಾರಾಕಾರವಾಗಿ ಸುರಿದ ಆಶ್ಲೇಷಾ ಮಳೆ ಭಾನುವಾರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದು, ಪರಿಣಾಮವಾಗಿ ನದಿ ತೊರೆಗಳ ಪ್ರವಾಹವೂ ಇಳಿಮುಖವಾಗಿ ಜಿಲ್ಲೆಯ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಧಾರಾಕಾರವಾಗಿ ಸುರಿದ ಮಳೆಗೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇವಾಲಯದಲ್ಲಿ ನದಿಯ ಹರಿವು ತಗ್ಗಿದೆ. ಭಾಗಮಂಡಲ-ತಲಕಾವೇರಿ ಮಾರ್ಗ ಸಾರಿಗೆ ಸಂಪರ್ಕಕ್ಕೆ ಮುಕ್ತವಾಗಿದೆ.
ಭಾಗಮಂಡಲದ ತ್ರೀವೇಣಿ ಸಂಗಮ ಸಮೀಪ ಮುಳುಗಡೆಗೊಂಡಿದ್ದ ಅಂಗಡಿಗಳನ್ನು ವರ್ತಕರು ಸ್ವಚ್ಛಗೊಳಿಸುತ್ತಿರುವ ದೃಶ್ಯವೂ ಕಂಡು ಬಂದಿತು. ಅಂಗಡಿಯಲ್ಲಿದ್ದ ಸರಕು ಪದಾರ್ಥಗಳು ನಷ್ಟವಾಗಿದ್ದು ಸಂಕಷ್ಟದ ಬದುಕು ದೂಡುವಂತಾಗಿದೆ ಎಂದು ಅಂಗಡಿ ಮಾಲಕರು ಅಳಲು ತೋಡಿಕೊಂಡರು.
ಪೆಟ್ಟಿಗೆ ಅಂಗಡಿ ಇಟ್ಟಿದ್ದ ವೃದ್ಧೆಯೊಬ್ಬರು 10 ವರ್ಷಗಳಿಂದ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ದೂಡುತ್ತಿದ್ದೆ. ಬಾಗಮಂಡಲದಲ್ಲಿ ಪ್ರವಾಹದಿಂದ ಆಕಾಶ ನೋಡುವಂತಾಗಿದೆ. ಭಾಗಮಂಡಲದಲ್ಲಿಯೇ ಹುಟ್ಟಿ ಬೆಳೆದು ಬದುಕು ಸವೆಸುತ್ತಿದ್ದೇವೆ. ಇನ್ನೆಲ್ಲಿ ಹೋಗುವುದು ಎಂದು ನೋವು ತೋಡಿಕೊಂಡರು.
ಶೋಧ ಕಾರ್ಯ ಚುರುಕು : ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ಭೂ ಸಮಾಧಿಯಾಗಿರುವ ಪ್ರದೇಶದಲ್ಲಿ ಭಾನುವಾರವೂ ನಾಲ್ವರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯಿತು. ಆದರೆ ಒಂದಷ್ಟು ಬಟ್ಟೆ ಹೊರತಾಗಿ ಏನನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ನೀಡಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಸೋಮವಾರ ಸ್ಥಳಕ್ಕೆ ಸೇನಾ ಪಡೆಯ ರಕ್ಷಣಾ ತಂಡವೂ ಆಗಮಿಸುವ ನಿರೀಕ್ಷೆ ಇರುವುದಾಗಿ ಸಚಿವ ಅಶೋಕ್ ತಿಳಿಸಿದರು.
ಇತ್ತ ಮಡಿಕೇರಿ-ಕುಶಾಲನಗರ ನಡುವಿನ ಗಂಧದ ಕೋಟೆ ಹಾಗೂ ತಾವರೆ ಕೆರೆ ಬಳಿಯೂ ಪ್ರವಾಹ ಇಳಿಮುಖವಾಗಿದ್ದು, ಭಾನುವಾರ ಸಂಜೆಯಿಂದ ವಾಹನ ಸಂಚಾರ ಆರಂಭವಾಗಿದೆ.
ಮಳೆ ವಿವರ : ಭಾನುವಾರ ಬೆಳಗ್ಗೆ 8.30 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 62..75 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 18.56 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 11.95 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಮಳೆ 31.08 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 32.8, ಸಂಪಾಜೆ 101.20, ಭಾಗಮಂಡಲ 82.8, ನಾಪೋಕ್ಲು 34.2, ವೀರಾಜಪೇಟೆ ಕಸಬಾ 24.8, ಹುದಿಕೇರಿ 23, ಅಮ್ಮತ್ತಿ 11, ಪೆÇನ್ನಂಪೇಟೆ 16, ಶ್ರೀಮಂಗಲ 21.6, ಬಾಳೆಲೆ 15, ಸೋಮವಾರಪೇಟೆ ಕಸಬಾ 7.6, ಶಾಂತಳ್ಳಿ 28.2, ಕೊಡ್ಲಿಪೇಟೆ 7.4, ಶನಿವಾರಸಂತೆ 4.8, ಕುಶಾಲನಗರ 5.4, ಸುಂಟಿಕೊಪ್ಪ 18.3, ಮಿ.ಮೀ.ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಭಾನುವಾರ ಜಲಾಶಯದ ನೀರಿನ ಮಟ್ಟವನ್ನು 2853.93 ಅಡಿಗಳಿಗೆ ಕಾಯ್ದರಿಸಿಕೊಂಡು ನದಿಗೆ 9150 ಹಾಗೂ ನಾಲೆಗೆ 200 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯಕ್ಕೆ 9010 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

Don't Miss

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...
error: Content is protected !!