ಮದ್ದೂರು: ಮಂಗಳವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಅಂಬರಹಳ್ಳಿ ಗ್ರಾಮದಲ್ಲಿ 30 ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ತೂರಿಹೋಗಿದ್ದು, ವಿದ್ಯುತ್ಕಂಬಗಳು, ಹಲವು ಮರಗಳು ಧರೆಗುರುಳಿರುವ ಘಟನೆ ನಡೆದಿದೆ.
ಪುಟ್ಟಸ್ವಾಮಿ, ಗಾಯಿತ್ರ, ಭಾರತಿ, ಆತ್ಮಾನಂದ, ಶಿವಮಾದು, ರಮೇಶ, ಸೋಮ, ಶಿವಣ್ಣ, ನಿಂಗಮ್ಮ ಸೇರಿದಂತೆ 30ಕ್ಕೂ ಹೆಚ್ಚು ಮಂದಿಯ ಮನೆಗಳ ಮೇಲ್ಚಾವಣಿ ಮಳೆಯಿಂದ ಹಾನಿಗೊಳಗಾಗಿ ಇನ್ನೂ ಕೆಲವು ಮನೆಗಳ ಗೋಡೆಗಳು ಕುಸಿದಿವೆ. ಜೊತೆಗೆ ವಿದ್ಯುತ್ಕಂಬಗಳು, ಹಲವು ಮರಗಳು ಧರೆಗುರುಳಿವೆ. ಇದರಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ.
ಇದರಿಂದ ಮನೆಯಲ್ಲಿದ್ದ ದವಸ-ಧಾನ್ಯಗಳು, ಬಟ್ಟೆ, ಬೆಲೆಬಾಳುವ ವಸ್ತುಗಳು, ದೈನಂದಿನ ಪದಾರ್ಥಗಳು ಹಾನಿಗೊಳಗಾಗಿ ನಷ್ಟಗೊಂಡಿವೆ.
ಮನೆಯ ಮಾಲೀಕರು ಮನೆ ಕಳೆದುಕೊಂಡು ನಿರ್ಗತಿಕರಾಗಿ ಬೀದಿಗೆ ಬಿದ್ದಿದ್ದು, ಪರಿಹಾರಕ್ಕಾಗಿ ಸರ್ಕಾರದತ್ತ ಮುಖಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯ ಮೇಲ್ಚಾವಣಿ ತೂರಿಹೋದ ಹಿನ್ನೆಲೆಯಲ್ಲಿ ಗೋಡೆಗಳು ತೇವಗೊಂಡು ಕುಸಿದು ಬಿದ್ದಿವೆ.
ಸಂಬಂಧ ಪಟ್ಟ ಮದ್ದೂರು ತಾಲ್ಲೂಕಿನ ತಹಶೀಲ್ದಾರ್ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡಲು ಮುಂದಾಗೇಕೆಂದು ಹಾನಿಗೊಳಗಾದ ಮನೆಯ ಮಾಲೀಕರು ಒತ್ತಾಯಿಸಿದ್ದಾರೆ.