Saturday, August 13, 2022

Latest Posts

ಬಿರುಸಿನ ಮಳೆ: ಹುಲಸೂರ, ಭಾಲ್ಕಿ ತಾಲೂಕಿನಲ್ಲಿ ಹಾನಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

 ಬೀದರ:  ಕಳೆದೊಂದು ವಾರದಿಂದ ಮತ್ತು ಸೆ.20ರ ರಾತ್ರಿ ಬಿರುಸಿನ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೆ.21ರಂದು ಭಾಲ್ಕಿ ಮತ್ತು ಹುಲಸೂರ ತಾಲೂಕುಗಳಿಗೆ ದಿಢೀರ್ ಭೇಟಿ ನೀಡಿ, ತೀವ್ರ ಮಳೆಯಿಂದಾದ ಹಾನಿ ಪರಿಶೀಲಿಸಿದರು.
ಭಾಲ್ಕಿ-ಮಹಾರಾಷ್ಟç ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಂಚೂರ ಬ್ರಿಜ್ ಒಡೆದಿರುವುದನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ವೀಕ್ಷಣೆ ನಡೆಸಿದರು. ಬ್ರಿಜ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅನುಕೂಲವಾಗಲು ನಿರ್ಮಿಸಿದ ರ‍್ಯಾಯ ಮಾರ್ಗದಲ್ಲಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಇದೆ ವೇಳೆ ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರಸ್ತೆಯಲ್ಲಿನ ಜಮಖಂಡಿ ಸೇತುವೆ ಹಾಳಾಗಿರುವುದನ್ನು ಕೂಡ ಜಿಲ್ಲಾಧಿಕಾರಿಗಳು ವೀಕ್ಷಣೆ ನಡೆಸಿದರು.
ಬೆಳೆ ಹಾನಿ ಪರಿಶೀಲನೆ: ಜಿಲ್ಲಾಧಿಕಾರಿಗಳು ಹುಲುಸೂರ ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಹುಲಸೂರ ವಾರ್ಡ-1ಗೆ ಭೇಟಿ ನೀಡಿದರು. ವಿಪರೀತ ಮಳೆಬಂದು ವಾರ್ಡನಲ್ಲಿ ಹಾನಿಯಾಗಿರುವುದನ್ನು ವರದಿ ಮಾಡಿ ಪರಿಹಾರೋಪಾಯ ಕೈಗೊಳ್ಳಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತೀವ್ರ ಮಳೆಯಿಂದಾಗಿ ಹುಲಸೂರ, ಭಾಲ್ಕಿ ತಾಲೂಕುಗಳ ವ್ಯಾಪ್ತಿಯ ಜಮೀನುಗಳಲ್ಲಿ ಉಂಟಾದ ಬೆಳೆಹಾನಿ ವೀಕ್ಷಣೆ ನಡೆಸಿದರು. ವಿಪರೀತ ಮಳೆಯಿಂದಾಗಿ ಜಮೀನೊಂದರಲ್ಲಿನ ತೊಗರಿ ಬೆಳೆ ಕೊಚ್ಚಿ ಹೋಗಿರುವುದರ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಬೆಳೆಹಾನಿ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ಸಿಗಬೇಕು. ಇದಕ್ಕೆ ಸಂಬAಧಿಸಿದ ಕಾರ್ಯವು ತೀವ್ರಗತಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಿನಿವಿಧಾನಸೌಧ ಕಟ್ಟಡ ನಿರ್ಮಾಣದ ಸ್ಥಳ ಪರಿವೀಕ್ಷಣೆ: ಹುಲಸೂರ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕೆಲವು ಪ್ರಸ್ತಾವನೆಗಳು ಬಂದಿರುವುದಾಗಿ ಇದೆ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇದೆ ವೇಳೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಸ್ಥಳ ಪರಿವೀಕ್ಷಣೆ ನಡೆಸಿದರು.
ಈ ವೇಳೆ ಹುಲಸೂರ ತಾಪಂ ಅಧ್ಯಕ್ಷ ಸಿದ್ರಾಮ, ಬಸವಕಲ್ಯಾಣ ತಹಸೀಲ್ದಾರ ಸಾವಿತ್ರಿ ಸಲಗರ, ಬಸವಕಲ್ಯಾಣ ತಾಪಂ ಕಾರ್ಯನಿರ್ವಹಣಾಧಿಕಾರಿ ಬೀರಸಿಂಗ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧೀರ್ ಕಾಡಾದಿ, ಹುಲಸೂರ ತಾಲೂಕಿನ ಪ್ರಮುಖರಾದ ಅನೀಲ ಬೂಸಾರೆ, ಲತಾ ಹಾರಕೂಡೆ ಹಾಗೂ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss