ಹೊಸ ದಿಗಂತ ವರದಿ, ಮೈಸೂರು:
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ 14,000 ರೂ. ಪಾವತಿಸಿ ಮೈಸೂರು ಮೃಗಾಲಯದ 2-ಬಿಳಿ ನವಿಲು ಮತ್ತು ಕಾರಂಜಿ ಕೆರೆಯಲ್ಲಿರುವ 2-ಕಾಮನ್ ಪೀಫೌಲ್ ಪಕ್ಷಿಯನ್ನು 16/11/2020 ರಿಂದ 15/11/2021 ರವರೆಗೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಸ್.ಎ ರಾಮದಾಸ್ ಅವರಿಗೆ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.