ದೇಹದಲ್ಲಿ ಮೆಲಾನಿನ್ ನಲ್ಲಿ ವ್ಯತ್ಯಾಸ ಉಂಟಾದಾಗ ಬಿಳಿ ಮಚ್ಚೆ ಉಂಟಾಗುತ್ತದೆ. ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ ಹೆಚ್ಚಿನವರಿಗೆ ಸಮಸ್ಯೆಯಾಗಿದೆ. ಏಕೆಂದರೆ ಇದು ಒಂದು ಆದರೆ ಇಡೀ ದೇಹವನ್ನೂ ಆಕ್ರಮಿಸಿಕೊಳ್ಳುತ್ತದೆ. ಆರಂಭದಲ್ಲಿಯೇ ಇದಕ್ಕೆ ಔಷಧ ಮಾಡಿಕೊಳ್ಳಬೇಕು. ಕೆಲವರಿಗೆ ಬಿಳಿ ಮಚ್ಚೆ ವಂಶ ಪಾರಂಪರ್ಯವಾಗಿಯೂ ಬರುತ್ತದೆ. ಇನ್ನೂ ಕೆಲವರಿಗೆ ಸೂರ್ಯನ ಕಿರಣಗಳು ತಾಗಿಯೂ ಬರುತ್ತದೆ. ಈ ಕೆಳಗಿನ ಮನೆಮದ್ದು ಟ್ರೈ ಮಾಡಿದರೆ ಬಿಳಿ ಮಚ್ಚೆ ನಿವಾರಿಸಬಹುದು.
- ದಾಳಿಂಬೆ ಗಿಡದ ಎಲೆಯನ್ನು ಒಣಗಿಸಿ ಪುಡಿಮಾಡಿಕೊಳ್ಳಬೇಕು. ಆ ನಂತರ ಆ ಪುಡಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಡ ಬೇಕು. ಆಮೇಲೆ ಅದನ್ನು ಸೋಸಿಕೊಂಡು ದಿನವೂ ಕುಡಿಯಬೇಕು. ಹೀಗೆ ಪ್ರತಿ ದಿನ ಮಾಡಿದರೆ ಬಿಳಿ ಮಚ್ಚೆ ನಿವಾರಣೆಯಾಗುತ್ತದೆ.
- ತಾಮ್ರದ ಪಾತ್ರೆಯ ನೀರನ್ನು ಪ್ರತಿ ದಿನ ಹೆಚ್ಚು ಹೆಚ್ಚು ಕುಡಿದರೆ ಬಿಳಿ ಮಚ್ಚೆ ಆಗುವುದಿಲ್ಲ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆ ನೀರನ್ನು ಸೇವಿಸಿ.
- ಶುಂಠಿಯನ್ನು ಸಾಸಿವೆ ಕಾಳಿನೊಂದಿಗೆ ರುಬ್ಬಿಕೊಂಡು ಅದರ ರಸ ತೆಗೆದುಕೊಂಡು ಅದನ್ನು ಬಿಳಿ ಮಚ್ಚೆ ಆದ ಜಾಗದಲ್ಲಿ ಹಚ್ಚುವುದರಿಂದ ಬಿಳಿ ಮಚ್ಚೆ ಕಡಿಮೆ ಆಗುತ್ತದೆ.
- ಆಹಾರದಲ್ಲಿ ಹುಳಿ ಪದಾರ್ಥಗಳು, ಟೊಮೆಟೊ, ನಿಂಬೆಹಣ್ಣು, ಹುಳಸೆಹಣ್ಣು ಇವುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಡಿ. ಹುಳಿ ಹೆಚ್ಚು ಸೇವಿಸಿಷ್ಟು ಬಿಳಿ ಮಚ್ಚೆ ಹೆಚ್ಚುತ್ತದೆ.
- ಸ್ನಾನಕ್ಕೆ ಹೆಚ್ಚು ಬಿಸಿನೀರನ್ನು ಬಳಸಬಾರದು. ಬಿಸಿಲಿನಲ್ಲಿ ಛತ್ರಿ ಇಲ್ಲದೇ ಹೋಗಬಾರದು. ಹತ್ತಿ ಬಟ್ಟೆಯನ್ನು ಹೆಚ್ಚು ಬಳಸಬೇಡಿ. ಆದಷ್ಟು ಕಾಟನ್ ಬಟ್ಟೆಯನ್ನೇ ಬಳಸಬೇಕು.
- ಅಧಿಕ ರಾಸಾಯನಿಕವಿರುವ ಸೋಪನ್ನು ಬಳಸಬೇಡಿ. ಆದಷ್ಟು ಕಡಲೇ ಹಿಟ್ಟಿನಿಂದಲೇ ಸ್ನಾನ ಮಾಡಿ. ಕಡೆಲೇ ಹಿಟ್ಟಿನಿಂದ ಸ್ನಾನ ಮಾಡಿದರೆ ಬಿಳಿ ಮಚ್ಚೆ ನಿಯಂತ್ರಣದಲ್ಲಿ ಇರುತ್ತದೆ.