ಕೋಲ್ಕತ್ತ :ಅನಿಶ್ವಿತವಾಗಿರುವ ಐಪಿಎಲ್ ಪಂದ್ಯಗಳ ಬಗ್ಗೆ ಸೋಮವಾರ ಖಚಿತ ತೀರ್ಮಾನ ಹೊರಬೀಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಿರ್ವಹಿಸುವುದು ಕಷ್ಟ ಸಾಧ್ಯ ಎಂದೂ ಗಂಗೂಲಿ ಅಸಹಾಯಕತೆ ವ್ಯಕ್ತಪಡಿಸಿದ್ದು, ಯಾವುದಕ್ಕೂ ಸೋಮವಾರದಂದು ಅಂತಿಮ ನಿರ್ಣಯ ಹೊರಬೀಳಲಿದೆ ಎಂದರು.
ದೇಶದಲ್ಲಿ ಎಲ್ಲೆಡೆ ಇಂದು ಕೋರೋನಾ ಕರಿನೆರಳು ಅವರಿಸಿದೆ. ಮಿಗಿಲಾಗಿ ವಿದೇಶಗಳ ನಡುವೆ ಭಾರತಕ್ಕೆ ಇಂದು ಜನಸಂಪರ್ಕವೇ ಕಡಿದುಹೋಗಿದೆ,. ವಿಮಾನ ಹಾರಾಟ, ರೈಲುಗಳ ಓಡಾಡ ಎಲ್ಲವೂ ಸ್ಥಬ್ದವಾಗಿರುವಾಗ ಖಾಲಿ ಮೈದಾನಗಳಲ್ಲಿ ಆಟಗಾರರು ಆಟವಾಡವುದಾದರೂ ಹೇಗೆ ? ಇಡೀ ಪ್ರಪಂಚವೇ ಇಂದು ತತ್ತರಿಸಿರುವಾಗ ಐಪಿಎಲ್ ಪಂದ್ಯಗಳ ನಿರ್ವಹಣೆ ಹೇಗೆಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಪ್ರಶ್ನೆ ಕೇಳಿದ ಸುದ್ದಿಗಾರರಿಗೆ ಗಂಗೂಲಿ ತುಸು ಖಾರವಾಗಿಯೇ ಉತ್ತರ ನೀಡಿದರು.
ಐಪಿಎಲ್ ಆಟಗಳಲ್ಲಿ ವಿದೇಶಿ ಆಟಗಾರರೂ ಇದ್ದು ಇವರಿಗೆ, ಈ ಸಂಕಷ್ಟ ಸಮಯದಲ್ಲಿ ಭಾರತದಲ್ಲಿ ಊಟ ಮತ್ತು ವಸತಿ ಒದಗಿಸುವುದೂ ಒಂದು ಸವಾಲು. ಇವೆಲ್ಲ ಪ್ರಮುಖ ಸಂಗತಿಗಳನ್ನು ಬಿಸಿಸಿಐ ಗಂಭೀರವಾಗಿ ಚರ್ಚಿಸಿದನಂತರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕೋರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ಸಾರಿ ಇನ್ನೂ ಐಪಿಎಲ್ ಸೀಸನ್ ಶುರುವಾಗಿಲ್ಲ. ಖಾಲಿ ಮೈದಾನದಲ್ಲಿ ಪಂದ್ಯಗಳು ನಡೆಯಬೇಕೇ ? ಎಂಬುದರ ಬಗ್ಗೆ ಬಿಸಿಸಿಐ ಮಟ್ಟದಲ್ಲಲ್ಲದೆ ದೇಶದ ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆ ಮುಂದುವರಿದಿದೆ.