Monday, August 8, 2022

Latest Posts

ಬಿಸಿ ನೀರಿನಿಂದ ವಾಸಿಯಾಗುವ ನೋವೆಲ್ ಕೊರೋನಾಗೆ ಭಯ, ಪ್ರಚಾರ ಅಗತ್ಯವಿಲ್ಲ: ಶ್ರೀ ಕಲ್ಯಾಣ ಸ್ವಾಮೀಜಿ

ಬಳ್ಳಾರಿ: ಬಿಸಿ ನೀರಿನಿಂದ ವಾಸಿಯಾಗುವ ಈ ಕೊರೊನಾ ಖಾಯಿಲೆಗೆ ಕೋಟ್ಯಂತರ ರೂ.ಖರ್ಚು ಮಾಡಿ ದೊಡ್ಡಮಟ್ಟದ ಪ್ರಚಾರ ನೀಡಲಾಗುತ್ತಿದೆ. ಕೋವಿಡ್ ಸೋಂಕಿತರೊಂದಿಗೆ ಕಾಲ ಕಳೆದು ಬರುವೆ, ನನಗೆ ಕೋವಿಡ್ ಸೋಂಕು ಬರುತ್ತಾ ನೋಡುವೆ ಎಂದು ಕಮ್ಮರಚೇಡು ಶ್ರೀಮಠದ ಶ್ರೀ ಕಲ್ಯಾಣ ಸ್ವಾಮೀಜಿ ಸವಾಲೆಸೆದರು.
ನಗರದ ಸ್ನೇಹ ಸಂಪುಟದ ಸಭಾಂಗಣಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನೋವೆಲ್ ಕೊರೋನಾ ಭಯದಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಿಲ್ಲಾಡಳಿತ, ಕೇಂದ್ರ ಮತ್ತು ರಾಜ್ಯ ಸರ್ಕಾರವಾಗಳು ಕೊರೊನಾ ಸೋಂಕಿನ ಭಯವನ್ನು ಹೋಗಲಾಡಿಸಲು, ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಖಾಯಿಲೆ ಕೇವಲ ಬಿಸಿ ನೀರು ಕುಡಿಯುವದರಿಂದ ವಾಸಿಯಾಗಲಿದೆ. ಇದು ಕೇವಲ ಭಯದ ವಾತಾವರಣ ಸೃಷ್ಟಿಸುವ ಕೆಲಸವಾಗಿದೆ, ಬೇರೆ ಯಾವೂದೂ ಇಲ್ಲ, ನಾನು ಬೇಕಾದ್ರೆ ಚಾಲೆಂಜ್ ಮಾಡುವೆ ಎಂದು ಸವಾಲೆಸೆದರು. ಮಹಾಮಾರಿ ಕೋವಿಡ್ ನಿಂದ ಸಾವನ್ನಪ್ಪಿದವರ ಮೃತದೇಹ ಪರೀಕ್ಷೆಗೆ ಒಳಪಡಿಸಿದರೆ, ಅವರು ಬಲಿಯಾಗಿರುವುದು ಈ ಕೋವಿಡ್ ಅಲ್ಲ, ಇದಕ್ಕೆ‌ ಬೇರೆ, ಬೇರೆ ಕಾರಣಗಳಿವೆ ಎಂಬುದು ತಿಳಿಯಲಿದೆ. ಮುಖ್ಯವಾಗಿ ಜನರು ಈ ಕೊವೀಡ್ ಗೆ ಭಯ ಭೀತರಾಗಿದ್ದಾರೆ, ಇದೇ ಕೆಲ ಜನರು ಸಾಯಲು‌ ಪ್ರಮುಖ ಕಾರಣವಾಗಿದೆ. ಧೈರ್ಯದಿಂದ ಇದ್ದರೇ ಯಾವ ರೋಗವೂ ಹತ್ತಿರ ಬರೋಲ್ಲ. ಧೈರ್ಯಂ ಸರ್ವತ್ರ ಸಾಧನಂ ಎನ್ನುವುದು ಸುಳ್ಳಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು. ಇತ್ತೀಚೆಗೆ ಸೋಂಕಿನಿಂದ ಜನರು ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸೋಂಕಿನ ಭಯದಿಂದ ಅಥವಾ ಗಂಭೀರ ಸ್ವರೂಪದ ಕಾಯಿಲೆಗಳಿಂದ ಎಂದು ಸ್ಪಷ್ಟಪಡಿಸಿದರು. ‌ನಾನು ಕೂಡ ಕೋವಿಡ್ ಸೋಂಕಿತರೊಂದಿಗೆ ಬೆರೆತು ಬರುವೆ. ನನಗೆ ಟೆಸ್ಟ್ ಮಾಡಿ ನೋಡಿ ರಿಸಲ್ಟ್ ನೆಗಟೀವ್ ಬರಲಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಈ ಕೋವಿಡ್ ಸೋಂಕಿನ ಭಯ ಹೆಚ್ಚುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಹಾಗೂ ರಾಷ್ಟ್ರಪತಿ ರಮಾನಾಥ ಕೋವಿಂದ್​ ಸೇರಿದಂತೆ ಯಾರೊಬ್ಬರೂ ಕೂಡ ಈ ಸೋಂಕಿನಿಂದ ಸಾಯಲ್ಲ ಎಂದು ಧೈರ್ಯವಾಗಿ ಹೇಳೋಕೆ ತಯಾರಿಲ್ಲ, ಮಾಸ್ಕ್ ಧರಿಸಿದ್ರೆ ಸೋಂಕು ಹರಡಲ್ಲ ಎನ್ನುವುದು ಶುದ್ದ ಸುಳ್ಳು, ಇದರಿಂದ ಜನರು ಉಸಿರುಗಟ್ಟಿ ಸಾಯುತ್ತಾರೆ. ಗ್ರಾಮೀಣ ಭಾಗಕ್ಕೆ ಒಮ್ಮೆ ಭೇಟಿ ಕೊಡಿ, ಅವರು ಯಾರೂ ಕೂಡ ಮಾಸ್ಕ್, ಸ್ಯಾನಿಟೈಸರ್ ಬಳಸಲ್ಲ. ಸಾಮೂಹಿಕವಾಗಿ ಊಟ ಮಾಡ್ತಾರೆ. ಅವರಿಗೆ ಏಕೆ ಕೋವಿಡ್ ಬರಲ್ಲ‌ ಎಂದು ಪ್ರಶ್ನಿಸಿದರು. ಕೋವಿಡ್ ಸೋಂಕು ಹರಡೋ ವೇಳೆ ಮಹಾರಾಷ್ಟ್ರದಲ್ಲಿ 10 ಸಾವಿರ ಭಕ್ತರ ಮಧ್ಯೆ ಓಡಾಡಿಕೊಂಡು ಬಂದಿರುವೆ. ಕಲಬುರಗಿಯಲ್ಲೂ ಕೂಡ ಇಂಥದ್ದೇ ವಾತಾವರಣದಲ್ಲಿ ಓಡಾಡಿಕೊಂಡು ಬಂದಿರುವೆ. ಆದರೂ, ಕೋವಿಡ್ ಹತ್ರ ಸುಳಿದಿಲ್ಲ, ಸುಳಿಯೋದು ಇಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದರೂರು ಪುರುಷೋತ್ತಮ ಗೌಡ, ಅಲಿವೇಲು ಸುರೇಶ್, ಕಲ್ಲುಕಂಭ ಪಂಪಾಪತಿ ಸೇರಿದಂತೆ ವಿವಿಧ ಸ್ವಾಮಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss