Sunday, July 3, 2022

Latest Posts

ಬಿಸಿ-ಬಿಸಿ ಅನ್ನದ ಜೊತೆ ಸೇವಿಸಿ ಮಾವಿನ ಕಾಯಿ ಭೂತ ಗೊಜ್ಜು.. ಈಸಿ ರೆಸಿಪಿ…

ಮಾವಿನ ಕಾಯಿಯಿಂದ ಬಹಳಷ್ಟು ಅಡುಗೆ ಮಾಡಬಹುದು. ಅವುಗಳಲ್ಲಿ ಬಹಳ ಸ್ಪೆಷಲ್ ಅಡುಗೆ ಎಂದರೆ ಮಾವಿನ ಕಾಯಿ ಭೂತ ಗೊಜ್ಜು.. ಇದನ್ನು ಬಹಳ ಸಿಂಪಲ್ ಆಗಿ ಬೇಗ ಮಾಡಬಹುದು. ಬಿಸಿ-ಬಿಸಿ ಅನ್ನದ ಜೊತೆ ಬಹಳ ರುಚಿಯಾಗುವ ರೆಸಿಪಿ ಇದು. ಹೆಚ್ಚಾಗಿ ಇದನ್ನು ಉತ್ತರ ಕನ್ನಡದ ಕಡೆ ಮಾಡುತ್ತಾರೆ. ಇಲ್ಲಿದೆ ಈಸಿ ರೆಸಿಪಿ…

ಬೇಕಾಗುವ ಸಾಮಗ್ರಿ:

ಮಾವಿನ ಕಾಯಿ
ಬೆಳ್ಳುಳ್ಳಿ
ಮೊಸರು
ಸಾಸಿವೆ
ಇಂಗು
ಸೂಜು ಮೆಣಸು
ಉದ್ದಿನ ಬೇಳೆ
ಉಪ್ಪು
ಕಾಯಿ ತುರಿ

ಮಾಡುವ ವಿಧಾನ:
ಮಾವಿನ ಕಾಯಿಯನ್ನು ಬೇಯಿಸಿಕೊಳ್ಳಿ. ತಣ್ಣಗಾದ ಮೇ ಗೊರಟೆ ತೆಗೆದು ಮಾವಿನ ಕಾಯಿಯನ್ನು ಕಿವುಚಿಕೊಳ್ಳಿ.
ನಂತರ ಅರ್ಧ ಕಪ್ ಕಾಯಿತುರಿಯನ್ನು ತೆಗೆದುಕೊಳ್ಳಿ. ಅದಕ್ಕೆ ಸೂಜು ಮೆಣಸು, ಬೆಳ್ಳುಳ್ಳು ಹಾಕಿ ರುಬ್ಬಿಕೊಳ್ಳಿ.
ಆಮೇಲೆ ರುಬ್ಬಿಕೊಂಡಿರುವುದನ್ನು ಮಾವಿನಕಾಯಿಗೆ ಹಾಕಿರಿ. ನಂತರ ಅದಕ್ಕೆ ಕಾಲು ಕಪ್ ಮೊಸರನ್ನು ಹಾಕಿರಿ. ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಮಿಶ್ರಣ ಮಾಡಿರಿ.
ಆನಂತರ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಇಂಗು ಹಾಕಿ ಒಗ್ಗರಣೆ ಮಾಡಿ ಮಾವಿನ ಕಾಯಿ ಮಿಶ್ರಣಕ್ಕೆ ಹಾಕಿದರೆ ಮಾವಿನ ಕಾಯಿ ಭೂತ ಗೊಜ್ಜು ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss