ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕಾವೇರುತ್ತಿದ್ದು, ಇದೀಗ ಮಹಾಘಟಬಂಧನಕ್ಕೆ ಆತಂಕದ ಅಲೆ ಎದ್ದಿದೆ. ಚುನಾವಣೆಯಲ್ಲಿನ ಮ್ಯಾಜಿಕ್ ನಂಬರ್ 122 ಗಳಿಸುವ ಹಾದಿಯಲ್ಲಿ ಎನ್ ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಗಳಿಸಿದೆ.
ಬಿಹಾದಲ್ಲಿನ ಚುನಾವಣಾ ಕದನದಲ್ಲಿ ಬಿಜೆಪಿ ಜಯಗಳಿಸುವುದು ಬಹುತೇಕ ಖಚಿತವಾಗಿದ್ದು, ಸದ್ಯ 131 ಸ್ಥಾನಗಳಲ್ಲಿ ಎನ್ ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, 101 ಕ್ಷೇತ್ರದಲ್ಲಿ ಮಹಾಘಟಬಂಧನ್ ಮುನ್ನಡೆ ಗಳಿಸಿದೆ. ಅಂತಿಮ ಫಲಿತಾಂಶಕ್ಕಾಗಿ ಕಾಯಬೇಕಿದೆ.
ಈ ಬಗ್ಗೆ ಮಾತನಾಡಿದ ಬಿಹಾರ ಚುನಾವಣಾ ಅಧಿಕಾರಿಗಳು ಇಂದು ರಾತ್ರಿಯ ವೇಳೆಗೆ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ ಎಂದರು.