Tuesday, June 28, 2022

Latest Posts

ಬಿಹಾರದ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಮಹಾಮೈತ್ರಿಯಲ್ಲೂ ಬಿರುಕು: ಆರ್‌ಜೆಡಿ ಬಿಟ್ಟು ಪಕ್ಷಗಳ ಸಭೆ

ಪಾಟ್ನಾ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಮಹಾ ಮೈತ್ರಿಕೂಟದಲ್ಲೂ ಈಗ ಬಿರುಕು ಮೂಡಿದ್ದು, ಇದೀಗ ಆರ್‌ಜೆಡಿಯೇತರ ಪಕ್ಷಗಳು ಪ್ರತ್ಯೇಕ ಸಭೆಯನ್ನು ನಡೆಸುವ ಮೂಲಕ ಆರ್‌ಜೆಡಿಗೆ ತೀವ್ರ ಹಿನ್ನಡೆಯುಂಟಾಗಿದೆ.
ಆರ್‌ಜೆಡಿಯ ಪ್ರತ್ಯೇಕ ಕಾರ್ಯಸೂಚಿಯೊಂದರ ಮೂಲಕ ಸಾಗುತ್ತಿದ್ದು, ಇದರಿಂದ ಈ ವರ್ಷಾಂತ್ಯಕ್ಕೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲ ಇ ಆಳುವ ಎನ್‌ಡಿಎ ಮೈತ್ರಿಕೂಟವನ್ನು ವಿಪಕ್ಷಕ್ಕೆ ಎದುರಿಸಲು ಕಷ್ಟ ಸಾಧ್ಯವಾಗಲಿದೆ. ಇದಕ್ಕೆ ಆರ್‌ಜೆಡಿ ನಿಲುವೇ ಕಾರಣ ಎಂಬುದಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ತಾನಿ ಅವಾಮ್ ಮೋರ್ಚಾ ನಾಯಕನಾಗಿರುವ ಜಿತಿನ್ ರಾಮ್ ಮಂಜಿ ಆರೋಪಿಸಿದ್ದಾರೆ. ಇದರೊಂದಿಗೆ ಐದು ಪಕ್ಷಗಳ ಈ ಮಹಾ ಮೈತ್ರಿಕೂಟದಲ್ಲಿ ತೀವ್ರ ತಲ್ಲಣವುಂಟಾಗಿದೆ.ಶುಕ್ರವಾರ ತಡಾ ರಾತ್ರಿ ಮಂಜಿ ಅವರು ತನ್ನ ಅಕೃತ ನಿವಾಸದಲ್ಲಿ ಮಹಾಮೈತ್ರಿಕೂಟದ ಪಾಲುದಾರರ ಜೊತೆ ಸಭೆ ನಡೆಸಿದ್ದಾರೆ. ಇದರಲ್ಲಿ ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ್, ವಿಐಪಿ ಸ್ಥಾಪಕ ಮುಕೇಶ್ ಸಾಹ್ನಿ ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿಯ ‘ತಾಲಿ ಬಜಾವೋ ’ಕಾರ್ಯಕ್ರಮವನ್ನು ತೀವ್ರವಾಗಿ ಆಕ್ಷೇಪಿಸಲಾಯಿತು. ಆರ್‌ಜೆಡಿ ನಾಯಕ ಲಾಲೂ ಮೇವು ಹಗರಣದಲ್ಲಿ ಜೈಲಿನಲ್ಲಿದ್ದಾರೆ.
ಭಾನುವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ರ್‍ಯಾಲಿ ನಡೆಯಲಿದ್ದು, ಇದರ ವಿರುದ್ಧ ಆರ್‌ಜೆಡಿ ತಾಲಿ ಬಜಾವೋ ಪ್ರತಿಭಟನೆ ಆಯೋಜಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss