Monday, August 8, 2022

Latest Posts

ಬಿಹಾರದಲ್ಲಿ ಮುನ್ನಡೆ ಕಾಯ್ದುಗೊಂಡ ಎನ್‌ಡಿಎ ಮೈತ್ರಿಕೂಟ: ನಿತೀಶ್ ಕುಮಾರ್‌ಗೆ ಅಮಿತ್‌ ಶಾ ಕರೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯನ್ನು ಈಗ ಇಡೀ ದೇಶ ಎದುರುನೋಡುತ್ತಿದ್ದು, ಸದ್ಯಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಈ ಮದ್ಯೆ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿರುವ ಕಾರಣ ಅಮಿತ್ ಶಾ ನಿತೀಶ್ ಕುಮಾರ್‌ಗೆ ಕರೆ ಮಾಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಚುನಾವಣಾ ಫಲಿತಾಂಶದ ಕುರಿತು ಅವರಿಬ್ಬರು ಚರ್ಚೆ ನಡೆಸಿದ್ದಾರೆ. ಆದರೆ ಏನೇನು ಚರ್ಚೆ ನಡೆದಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಎನ್‌ಡಿಎ ಗೆಲುವಿನ ನಂತರ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಎನ್‌ಡಿಎ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುಲಾಗುತ್ತದೆ ಎನ್ನುವ ಸದ್ಯದ ಲೆಕ್ಕಾಚಾರವಾದರೂ, ಬಳಿಕ ಬದಲಾದರೂ ಅಚ್ಚರಿಯಿಲ್ಲ.
ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ, ಆದರೆ ಪ್ರಧಾನಿ ನರೇಂದ್ರಮೋದಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss