ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಕಳೆದ ತಿಂಗಳು ಬಿಹಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಹನವಾಜ್ ಹುಸೇನ್ ಅವರು ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಜ್ ಭವನದಲ್ಲಿ ನಡೆದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ರಾಜ್ಯಪಾಲ ಫಾಗು ಚೌಹಾನ್ ಅವರು ಪ್ರಮಾಣವಚನ ಬೋಧಿಸಿದರು.
ನಿತೀಶ್ ಕುಮಾರ್ ಅವರ ಸಚಿವ ಸಂಪುಟಕ್ಕೆ ನೂತನವಾಗಿ ಬಿಜೆಪಿಯ ಹತ್ತು ಮಂದಿ ಸೇರ್ಪಡೆಗೊಂಡಿದ್ದು, ಇದರಲ್ಲಿ ಎಮ್ ಎಲ್ ಸಿ ಶಹನವಾಜ್ ಹುಸೈನ್, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರ ನೀರಜ್ ಕುಮಾರ್ ಬಬ್ಲೂ, ನಿತೀನ್ ನವೀನ್, ಸಾಮ್ರಾಟ್ ಚೌಧರಿ, ಸುಭಾಶ್ ಸಿಂಗ್, ಜನಕ್ ರಾಮ್, ಅಲೋಕ್ ರಂಜನ್ ಜಾ, ನಾರಾಯಣ್ ಪ್ರಸಾದ್, ಪ್ರಮೋದ್ ಕುಮಾರ್ ಮತ್ತು ಸುನೀಲ್ ಕುಮಾರ್ ಸಚಿವ ಸ್ಥಾನ ಪಡೆದಿದ್ದಾರೆ.
ಜೆಡಿಯುನ ಲೇಶಿ ಸಿಂಗ್, ಸಂಜಯ್ ಜಾ, ಮದನ್ ಸಾಹ್ನಿ, ಶ್ರವಣ್ ಕುಮಾರ್, ಜಯಂತ್ ರಾಜ್ ಮತ್ತು ಜಾಮಾ ಖಾನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥೊ ಸುಮಿತ್ ಸಿಂಗ್, ಜಿತನ್ ರಾಂ ಮಾಂಜಿಯ ಹಿಂದುಸ್ತಾನ್ ಏವಂ ಮೋರ್ಚಾ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಸದಸ್ಯರು ಸಚಿವ ಸ್ಥಾನ ಪಡೆದಿದ್ದಾರೆ.