Monday, March 1, 2021

Latest Posts

ಬಿ ಖರಾಬಿನಿಂದ ಮುಕ್ತವಾದ ಕುರುಬಾರಹಳ್ಳಿ, ಆಲನಹಳ್ಳಿಯ 354 ಎಕರೆ ಪ್ರದೇಶ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಕುರುಬಾರಹಳ್ಳಿ ಸರ್ವೆ ನಂ ೪ ಸೇರಿದಂತೆ ಇನ್ನೀತರ ಪ್ರದೇಶದ ಒಟ್ಟು ೩೫೪.೨೯ ಎಕರೆ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಮೈಸೂರು ತಾಲೂಕು ಕಸಬಾ ಹೋಬಳಿಯ ಕುರುಬಾರಹಳ್ಳಿಯ ಸರ್ವೇ ನಂ ೪ ರಲ್ಲಿ ಹಾಗೂ ಆಲನಹಳ್ಳಿಯ ಸರ್ವೇ ನಂ ೪೧ರಲ್ಲಿನ ಸಿದ್ಧಾರ್ಥ ನಗರ ಬಡಾವಣೆಗಾಗಿ, ಜೆಸಿ ಬಡಾವಣೆ, ಕೆಸಿ ಬಡಾವಣೆಗಾಗಿ ಭೂಸ್ವಾಧೀನಪಡಿಸಿದ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಬಡಾವಣೆಗೆ ಖಾತೆ , ಖಾತೆ ದೃಢೀಕರಣ ಪತ್ರ, ನಕ್ಷೆ ಅನುಮೋದನೆ, ಕಂದಾಯ ನಿಗದಿಪಡಿಸುವುದು, ಸಿ.ಆರ್.ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಹಾಗೂ ಮುಡಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಶಾಸಕ ಎಸ್.ಎ. ರಾಮದಾಸ್ ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್ ೫ ರಿಂದ ರಾಜ್ಯದಲ್ಲಿನ ಎಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವರು ಆಯಾ ನಾಡ ಕಛೇರಿಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬಹುದು ಎಂದು ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಕೇವಲ ವದಂತಿ, ಸಚಿವ ಸ್ಥಾನದ ಯಾವುದೇ ಅಪೇಕ್ಷೆ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!