Thursday, June 30, 2022

Latest Posts

ಬೀಜಿಂಗ್ ನಗರಕ್ಕೆ ಭೇಟಿ ನೀಡುವವರಿಗೆ ಒಂಟಿತನದ ಶಿಕ್ಷೆ

ಬೀಜಿಂಗ್: ಕೊರೋನಾ ವೈರಸ್ ನ ರೌರ್ದನರ್ತನಕ್ಕೆ ಬೆಚ್ಚಿ ಬಿದ್ದಿರುವ ಚೀನಾ ಅಲ್ಲಿನ ಜನರಿಗೆ ಒಂಟಿತನದ ಶಿಕ್ಷೆ ವಿಧಿಸಿದೆ.

ಚೀನಾದ ವುಹಾನ್ ಮತ್ತು ಹುಬೈ ನಗರಗಳಲ್ಲಿ ಕೊರೋನಾ ವೈರಸ್ ಪ್ರಭಾವ ಹೆಚ್ಚಿದ್ದು, ದಿನೇ ದಿನೇ ಮೃತಪಡುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಈ ಪ್ರಾಂತ್ಯಗಳಲ್ಲಿನ ಜನರು ಬೇರೆ ನಗರಗಳಿಗೆ ಹೊರ ಬರುವುದು ಮತ್ತು ಬೇರೆ ನಗರಗಳಿಂದ ಇಲ್ಲಿಗೆ ಜನ ಬರುವುದನ್ನು ನಿಷೇಧಿಸಲಾಗಿದೆ. ಏತನ್ಮಧ್ಯೆ ಚೀನಾ ಶುಕ್ರವಾರ ಹೊಸ ನಿಯಮ ಜಾರಿಗೊಳಿಸಿದೆ.

ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಅಧಿಕ ಜನಸಂಖ್ಯೆ ಇದ್ದು, ಈ ಭಾಗಕ್ಕೆ ಕೊರೋನಾ ಹರಡಿದರೆ ಎಂಬ ಆತಂಕ ಸರ್ಕಾರವನ್ನು ಕಾಡಿದೆ. ಹೀಗಾಗಿ ಚೀನಾ ಸರ್ಕಾರ ಬೀಜಿಂಗ್ ನಗರ ಪ್ರವೇಶಿಸುವವರು 14 ದಿನ ಕಡ್ಡಾಯವಾಗಿ ಒಂಟಿಯಾಗಿರಬೇಕು ಎಂದು ಆದೇಶಿಸಿದೆ. ಒಂದು ವೇಳೆ ಈ ನಿಯಮ ಮೀರಿದರೆ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss