Sunday, June 26, 2022

Latest Posts

ಬೀಡಾಡಿ ಜಾನುವಾರುಗಳ ಅಪಘಾತ ತಪ್ಪಿಸಲು ಹೊಸ ಪ್ಲಾನ್: ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್

ಹೊಸ ದಿಗಂತ ವರದಿ, ಶಿವಮೊಗ್ಗ:

ನಗರ ಪ್ರದೇಶದಲ್ಲಿ ಬೀಡಾಡಿ ಜಾನುವಾರುಗಳು ರಾತ್ರಿ ವೇಳೆ ಅಪಘಾತಕ್ಕೆ ಸಿಲುಕುವುದನ್ನು ತಪ್ಪಿಸಲು ಬಜರಂಗದಳ ಮತ್ತು ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಹೊಸದೊಂದು ಯೋಜನೆ ಸಿದ್ಧಪಡಿಸಿದ್ದಾರೆ.
ಬೀಡಾಡಿ ಎಲ್ಲೆಂದರಲ್ಲಿ, ರಾತ್ರಿ-ಬೆಳಗು ಎನ್ನದೇ ಸಂಚರಿಸುತ್ತಾ ಇರುತ್ತವೆ. ಕೆಲವೊಮ್ಮೆ ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆಯಲ್ಲಿ ಮಲಗಿರುವ ಬೀಡಾಡಿ ಜಾನುವಾರು ಕಾಣದೇ ಅಪಘಾತ ಸಂಭವಿಸಿ ಜಾನುವಾರು ಮತ್ತು ವಾಹನ ಸವಾರರ ಪ್ರಾಣ ಹಾನಿ ಸಂಭವಿಸುತ್ತಿದೆ. ಬೀಡಾಡಿ ಜಾನುವಾರು ಗಾಯಗೊಂಡರೆ ಉಪಚಾರ ಮಾಡುವವರೂ ಯಾರೂ ಇರುವುದಿಲ್ಲ.
ಇದನ್ನು ಮನಗಂಡ ಇಲ್ಲಿನ ವಿಶ್ವಹಿಂದು ಪರಿಷತ್, ಬಜರಂಗದಳ ಸ್ವಯಂ ಸೇವಕರ ತಂಡ ಬೀಡಾಡಿ ಜಾನುವಾರುಗಳ ಕೊಂಬಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭಿಸಿದೆ. ಶನಿವಾರ ರಾತ್ರಿ ಕಾರ್ಯಕರ್ತರ ತಂಡ ಶಿವಮೊಗ್ಗ ನಗರಾದ್ಯಂತ 25 ಕ್ಕೂ ಹೆಚ್ಚು ಜಾನುವಾರುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಿಹೆಚ್‌ಪಿ ನಗರ ಸಹ ಕಾರ್ಯದರ್ಶಿ ಮಂಜುಶೇಟ್, ಸುರೇಶ್ ಬಾಬು, ಬಜರಂಗದಳ ಗೋ ಪ್ರಮುಖ್ ಸಚಿನ್ ರಾಯ್ಕರ್, ವಿಹೆಚ್‌ಪಿ ಜಾಲತಾಣ ಪ್ರಮುಖ್ ಅಮಿತ್ ಕಟ್ಟೆ, ಅಕ್ಷಯ್, ಕಿರಣ್, ಶರಾವತಿ ಪ್ರಖಂಡ ಕಾರ್ಯದರ್ಶಿ ವಿಕಾಸ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss