Friday, July 1, 2022

Latest Posts

ಬೀದರ್: ಒಂದೇ ದಿನ 102 ಕೊರೋನಾ ಪ್ರಕರಣ ಧೃಡ

ಬೀದರ್: ಇಲ್ಲಿ ಕೊರೋನಾ ಅಟ್ಟಹಾಸ‌ ಮೆರೆದಿದೆ.  ಒಂದೇ ದಿನ ಶತಕ ಬಾರಿಸಿದ್ದು ನಿನ್ನೆ 102 ಜನಕ್ಕೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.

ಬೀದರ – 45, ಬಸವಕಲ್ಯಾಣ – 31, ಹುಮ್ನಬಾದ್ – 10, ಭಾಲ್ಕಿ – 10, ಔರಾದ್ – 6 ಜನಕ್ಕೆ ಪಾಸಿಟಿವ್ ವರದಿಯಾಗಿದೆ.ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಹೆಚ್ಚಾಗಿರುವ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 3748ಕ್ಕೆ ಏರಿಕೆಯಾಗಿದ್ದು ಇಂದು ಎಂಟು ಜನರು ಇಂದು ಕರೋನಾಕ್ಕೆ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾದ ಪ್ರಕರಣಗಳು ಒಟ್ಟು 3748ಕ್ಕೆ ಏರಿಕೆಯಾಗಿದೆ, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 116 ಕ್ಕೇರಿದೆ, ನಿನ್ನೆ ಒಂದೇ ದಿನದಲ್ಲಿ 8 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಡಿಚ್ಶಾರ್ಜ ಆದವರು 2592, ಒಟ್ಟು ಕೊರೊನಾ ಆಕ್ಟಿವ್ ಪ್ರಕರಣಗಳು 1036, 57978 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಪೈಕಿ 53746 ಸ್ಯಾಂಪಲ್ ನೆಗೆಟಿವ್ ಬಂದದ್ದು, ಇನ್ನೂ 484 ಜನರ ರಿಪೋರ್ಟ ಬರುವುದು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss