ಹೊಸದಿಗಂತ ವರದಿ, ಬೀದರ್:
ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜ.24ರಿಂದ ಬೀದರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಜನವರಿ ಜನವರಿ 24ರ ಬೆಳಗ್ಗೆ 10.30ಕ್ಕೆ ಬೊಂತಿಯಿಂದ ನಿರ್ಗಮಿಸಿ 12 ಗಂಟೆಗೆ ಬಸವಕಲ್ಯಾಣ ತಾಲೂಕಿಗೆ ತೆರಳಿ ಚಿಕನ್ಗಾಂವ್ದ ಬಂಜಾರಾ ತಾಂಡಾಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಹಿಂಗಳಸಾ ದೇವಿ ಜಾತ್ರೋತ್ಸವದಲ್ಲಿ ಭಾಗಿಯಾಗಲಿದ್ದು ನಂತರ ಹುಮನಾಬಾದ್ಗೆ ತೆರಳುತ್ತಾರೆ.
ಮಧ್ಯಾಹ್ನ 2.30ರಿಂದ ನಡೆಯುವ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಅವರೊಂದಿಗೆ ಬೀದರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಲೋಕೋಪಯೋಗಿ ಇಲಾಖೆಯ ಎಲ್ಲಾ ಅಂಗ ಸಂಸ್ಥೆಗಳ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗುವರು. ಬಳಿಕ ಮಧ್ಯಾಹ್ನ 3.45ಕ್ಕೆ ಬಸವಕಲ್ಯಾಣಕ್ಕೆ ಪ್ರಯಾಣ ಬೆಳೆಸುವರು. ಸಂಜೆ 4.15ಕ್ಕೆ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಅವರೊಂದಿಗೆ ಅನುಭವ ಮಂಟಪಕ್ಕೆ ಭೇಟಿ ನೀಡುವರು. ಸಂಜೆ 4.30ರಿಂದ ಬಸವಕಲ್ಯಾಣದಿಂದ ರಸ್ತೆ ಮಾರ್ಗವಾಗಿ ಹುಲಸೂರಗೆ ಪ್ರಯಾಣ ಬೆಳೆಸುವರು.
ಸಂಜೆ 5 ಗಂಟೆಗೆ ಭಾವೈಕ್ಯ ಬಸವ ಸಮ್ಮೇಳನ ಮತ್ತು ಪ್ರಥಮ ಕಸಾಪ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವರು. ಬಳಿಕ ಬೊಂತಿಗೆ ತೆರಳಿ ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.