Tuesday, July 5, 2022

Latest Posts

ಬೀದರ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕೆಲಸ ಕಾರ್ಯ ಪುನರ್ ಆರಂಭ

ಬೀದರ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಕಾರ್ಯ ಕಲಾಪಕ್ಕೆ ಸಾರ್ವಜನಿಕರ, ಕಕ್ಷಿದಾರರ, ನ್ಯಾಯವಾದಿಗಳ ಆರೋಗ್ಯದ ಸುರಕ್ಷತೆ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತಡೆಯಲು ಆದೇಶಿಸಿತ್ತು.
ಕಳೆದ ಸೋಮವಾರದಿಂದ ಜಿಲ್ಲೆಯಲ್ಲಿ ರಾಜ್ಯ ಉಚ್ಚ ರಾಜ್ಯದ ಆದೇಶದಂತೆ ಎಲ್ಲೆಡೆ ಜಿಲ್ಲಾ, ತಾಲ್ಲೂಕು ನ್ಯಾಯಾಲಯದ ಕಾರ್ಯ ಕಲಾಪ ಪುನರ್ ಆರಂಭಿಸಲಾಗಿದೆ ಎಂದು ಬೀದರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸತ್ಯನಾರಾಯಣಾಚಾರ್ಯ ತಿಳಿಸಿದರು.

ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬ ಕಕ್ಷಿದಾರರ, ನ್ಯಾಯವಾದಿಗಳ ಥರ್ಮಲ್ ಮಾಪಕದಲ್ಲಿ ತಾಪ ಪರಿಶೀಲನೆ ನಡೆಸಿಯೇ ಪ್ರಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕಕ್ಷಿದಾರರ, ಸುರಕ್ಷತೆ ಹಿತದೃಷ್ಟಿಯಿಂದ ನ್ಯಾಯವಾದಿಗಳ ಕಡೆಯಿಂದ ಲಿಖಿತ ಮುಚ್ಚಳಿಕೆಯನ್ನು ತೆಗೆದುಕೊಂಡೆ ನ್ಯಾಯಾಲಯದ ಕಾರ್ಯ ಕಲಾಪದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.
ಬೀದರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ 9 ಕೊರ್ಟ್ ಹಾಲ್ ಗಳಿವೆ, ಪ್ರತಿಯೊಂದು ಕೊರ್ಟ್ ಹಾಲ್ ನಲ್ಲಿ ಬೆಳಿಗ್ಗೆ 15 ಮತ್ತು ಸಂಜೆ 15 ಪ್ರಕರಣಗಳ ವಾದವನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಕೊರ್ಟ್ ಹಾಲ್ನಲ್ಲಿ 5 ಜನ ಸಾಕ್ಷಿದಾರರನ್ನಷ್ಟೇ ಬರಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ನ್ಯಾಯಾಲಯದ ಆವರಣದಲ್ಲಿ ಪ್ರತಿಯೊಬ್ಬರ ಸುರಕ್ಷತೆ ದೃಷ್ಟಿಯಿಂದ ತಪ್ಪದೇ ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss