ಬೀದರ್: ಶನಿವಾರ ಜಿಲ್ಲೆಯ ಬೀದರ್ ತಾಲೂಕಿನಲ್ಲಿ 25, ಭಾಲ್ಕಿ ತಾಲೂಕಿನಲ್ಲಿ 11, ಹುಮನಾಬಾದ ತಾಲೂಕಿನಲ್ಲಿ 04, ಔರಾದ ತಾಲೂಕಿನಲ್ಲಿ 05, ಬಸವಕಲ್ಯಾಣ ತಾಲೂಕಿನಲ್ಲಿ 02 ಸೇರಿ ಒಟ್ಟು 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1 ಸಾವಿರ 850 ಸೋಂಕಿತರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 896 ಕೊರೋನಾ ಸೋಂಕಿತರು ಬ್ರೀಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 2 ಸಾವಿರ 8432 ಪಾಸಿಟಿವ್ ಬಂದಿವೆ. 93 ಸೋಂಕಿತರು ಹಾಗೂ ಕೋವಿಡ್ ಅಲ್ಲದ ಅನ್ಯ ಕಾರಣದಿಂದ ನಾಲ್ವರು ಮೃತ್ಯಪಟ್ಟಿದ್ದಾರೆ.