Sunday, August 14, 2022

Latest Posts

ಬೀದರ್| ವಿಹಿಂಪ, ಬಜರಂಗ ದಳದಿಂದ ಕರಸೇವಕರ ಸ್ಮರಣೆಗಾಗಿ ರಕ್ತದಾನ ಶಿಬಿರ

ಹೊಸ ದಿಗಂತ ವರದಿ, ಬೀದರ್:

ವಿಶ್ವ ಹಿಂದೂ ಪರಿಷತನ್ ಅಂಗ ಸಂಸ್ಥೆಯಾದ ಬಜರಂಗ ದಳ ಮತ್ತು ಕೇಶವ ಸಂವರ್ಧನಾ ಸಮಿತಿಯ ಇವರ ಸಂಯುಕ್ತ ಆಶ್ರಯದಲ್ಲಿ ಬೀದರ್ ನಗರದ ರಕ್ತ ನಿಧಿ ಕೇಂದ್ರದಲ್ಲಿ ಬಾಬರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಸಹಸ್ರಾರು ಹಿಂದುಗಳ ರಕ್ತದ ಕೊಡಿ ಹರಿಯಿತು. ಬಾಬ್ರಿ ಧ್ವಂಸದಲ್ಲಿ ಬಲಿದಾನಗೊಂಡಿರುವ ದೇಶದ ಲಕ್ಷಾಂತರ ಹುತಾತ್ಮ ಕರಸೇವಕರ ಸ್ಮರಣೆಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು
ರಕ್ತದಾನ ಶಿಬಿರವನ್ನು ಭಾರತ ಮಾತೆಯ ಪೂಜೆಯೊಂದಿಗೆ ಉದ್ಘಾಟಿಸಿದ ವಿಶ್ವ ಹಿಂದೂ ಪರಿಷತ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ರಾಮಕೃಷ್ಣನ್ ಅವರು, ಸೇವಾ, ಸುರಕ್ಷಾ, ಸಂಸ್ಕಾರಗಳೆಂಬ ದ್ಯೇಯವನ್ನು ಹೊಂದಿರುವ ಬಜರಂಗದಳಕ್ಕೆ 36 ವರ್ಷ ಸಂದಿದೆ, ಜನ್ಮ ಭೂಮಿ, ದೇವ ಭೂಮಿ, ಪುಣ್ಯ ಭೂಮಿಯಾದ ತಾಯಿ ಭಾರತ ಮಾತೆಯ ರಕ್ಷಣೆ ಹಾಗೂ ಪವಿತ್ರ ಹಿಂದೂ ಧರ್ಮ ಸಂಸ್ಕøತಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ವಿಶ್ವ ಹಿಂದೂ ಪರಿಷತನ್ ಅಂಗ ಸಂಸ್ಥೆಯಾದ ಬಜರಂಗದಳ ಮತ್ತು ಕೇಶವ ಸಂವರ್ಧನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬೀದರ ಬ್ಲಡ್ ಬ್ಯಾಂಕಿನಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಭಜರಂಗ ದಳದ ಬೀದರ ಜಿಲ್ಲಾ ಸಂಯೋಜಕರಾದ ಸುನೀಲ ದಳವೆ ಅವರು, ಬಾಬರಿ ಮಸೀದಿಯ ಧ್ವಂಸದಲ್ಲಿ ಬಲಿದಾನಗೊಂಡ ಸಹಸ್ರಾರು ಜನರ ರಕ್ತದ ಕೋಡಿ ಹರಿಯಿತು. ಅಂತಹ ಹುತಾತ್ಮರ ಸ್ಮರಣೆಗಾಗಿ ಪ್ರತಿವರ್ಷ ನವ್ಹೆಂಬರ್-02 ರಿಂದ 8ರವರೆಗೆ ಬೀದರ ನಗರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಕಾಗುತ್ತದೆ ಎಂದರು.
ಕಳೆದ 7-8 ವರ್ಷದಿಂದ ರಕ್ತದಾನದಲ್ಲಿ 50-60 ಹಾಗೂ 70ರಷ್ಟು ಜನರು ಭಾಗಿಯಾಗುತ್ತಿದ್ದರು. ಈ ಸಲ ಕರೋನಾ ವಕ್ಕರಿಸಿದರಿಂದ ಬಹಳಷ್ಟು ರಕ್ತ ಕೇಂದ್ರಗಳಲ್ಲಿ ಬೇಡಿಕೆ ಹೆಚ್ಚಿ ರಕ್ತದ ಕೊರತೆಯಾಗಿದೆ. ಬೀದರನಲ್ಲಿ ಈ ಕೊರತೆÉ ಕಂಡುಬಂದಿರುವುದರಿಂದ ತಕ್ಷಣಕ್ಕೆ ಸ್ಪಂದಿಸಿ 30 ಯೂನಿಟ್ ರಕ್ತವನ್ನು ದಾನ ಮಾಡಲಾಯಿತು. ಬಜರಂಗದಳದ ಕಾರ್ಯಕರ್ತರು ಈ ಅವಸರದ ಕರೆಗೆ ಓಗೊಟ್ಟು ಈ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿದ್ದಾರೆ ಎಂದರು.
ಡಾ. ಕಲ್ಪನಾ ದೇಶಪಾಂಡೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ಮೂಲಕ ನಾನೂ ಸಮಾಜ ಸೇವೆಗೆ ಅಣಿಯಾಗಿದ್ದೇನೆ ಎಂದರು.
ಸತೀಷಕುಮಾರ ನೌಬಾದೆ, ಅಶೋಕ ಮಾನೂರೆ, ಮಹೇಶ ಕಟ್ಟೆ, ಆಕಾಶ ಗುತ್ತೆದಾರ, ರಕ್ತನಿಧಿ ಕೇಂದ್ರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss