ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೀದರ್| ಸರದಾರ್ ವಲ್ಲಭಭಾಯಿ ಪಟೇಲರ 18 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ: ಶಿವಶರಣಪ್ಪ ವಾಲಿ

ಬೀದರ್: ಅಖಂಡ ಭಾರತದ ನಿರ್ಮಾತೃ, ಭಾರತ ಮಾತೆಯ ಹೆಮ್ಮೆಯ ಪುತ್ರ ಸರದಾರ್ ವಲ್ಲಭಭಾಯಿ ಪಟೇಲರ 18 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಸರದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಇಲ್ಲಿ ಹೇಳಿದರು.
ಪ್ರತಿಮೆ ಸ್ಥಾಪನೆಯಾಗಲಿರುವ ನಗರದ ಬರೀದಶಾಹಿ ಉದ್ಯಾನದ ಎದುರಿರುವ ನಿಯೋಜಿತ ಸ್ಥಳದಲ್ಲಿ ಶನಿವಾರ ಸರದಾರ ವಲ್ಲಭಭಾಯಿ ಪಟೇಲ ಪ್ರತಿಷ್ಠಾನ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸರ್ವೋದಯ ನ್ಯಾಸ್, ಭಾರತ ಸೇವಾದಳ, ನಗರಸಭೆ ಮತ್ತು ಭಾರತ ಸಂರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ ಸರದಾರ ವಲ್ಲಭಭಾಯಿ ಪಟೇಲರ 146ನೇ ಜಯಂತಿ ನಿಮಿತ್ತ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಸರದಾರ್ ಪಟೇಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಗರದಲ್ಲಿ ಸರದಾರ್ ಪಟೇಲರ ಪ್ರತಿಮೆ ಸ್ಥಾಪನೆಗಾಗಿ ಎರಡು ದಶಕಗಳಿಂದ ಯತ್ನಿಸಲಾಗುತ್ತಿದೆ. 21 ವರ್ಷಗಳ ಹೋರಾಟದ ನಂತರ ಪ್ರತಿಮೆ ಸ್ಥಾಪನೆಗೆ ಸ್ಥಳ ಸಿಕ್ಕಿದೆ. 18 ಅಡಿ ಎತ್ತರದ ಕಂಚಿನ ಪ್ರತಿಮೆ ಈಗಾಗಲೇ ಸಿದ್ಧವಾಗಿದೆ. ಪ್ರತಿಮೆ ಸ್ಥಾಪನೆ, ವೃತ್ತ ಹಾಗೂ ಉದ್ಯಾನ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಈ ಕಾರ್ಯಕ್ಕೆ ಸಹಕಾರ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ಭಾರತವನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ ವಲ್ಲಭಭಾಯಿ ಪಟೇಲ್‍ರಿಗೆ ಸಲ್ಲುತ್ತದೆ ಎಂದು ಹೇಳಿದರು. 146ನೇ ಜಯಂತಿಯನ್ನು ಪ್ರತಿಮೆ ಸ್ಥಾಪನೆಯಾಗಲಿರುವ ಸ್ಥಳದಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಕಂಚಿನ ಪ್ರತಿಮೆ ಸ್ಥಾಪನೆಗೊಳ್ಳಲಿದೆ. ಹಿರಿಯರಾದ ಶಿವಶರಣಪ್ಪ ವಾಲಿ ಅವರು ಕಳೆದ 21 ವರ್ಷದಿಂದ ಹೋರಾಟ ಮಾಡಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕಾದ ಅಗತ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಅವರು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು. ಶ್ರೀಮತಿ ಶಕುಂತಲಾ ವಾಲಿ, ಜಿ.ಪಂ ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ, ಶಕುಂತಲಾ ಬೆಲ್ದಾಳೆ, ಡಾ. ರಜನೀಶ ವಾಲಿ, ದೀಪಕ್ ವಾಲಿ, ಕರ್ನಲ್ ಶರಣಪ್ಪ ಸಿಕೇನಪೂರ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿಜಿ ಶೆಟಕಾರ, ಡಾ. ಜಗನ್ನಾಥ ಹೆಬ್ಬಾಳೆ, ರೇವಣಸಿದ್ದಪ್ಪ ಜಲಾದೆ, ಅನೀಲಕುಮಾರ ಬೆಲ್ದಾರ, ಶ್ರೀಮಂತ ಸಪಾಟೆ, ಮತ್ತಿತರ ಗಣ್ಯರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss