ಬೀದರ: ಇಲ್ಲಿಗೆ ಸಮೀಪದ ಇಮಾಮಪೂರ ಬಳಿಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಸುಸ್ತಿದಾರ ಸದಸ್ಯರು ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯನ್ನು ಕಳೆದ ಏಪ್ರಿಲ್ 25 ರಂದು ನಡೆಸಲು ಚುನಾವಣಾಧಿಕಾರಿಗಳು ದಿನಾಂಕವನ್ನು ಜ ಅಧಿಸೂಚನೆ ಹೊರಡಿಸಿದ್ದರು ಆದರೆ, ಸಹಕಾರ ಚುನಾವಣಾ ಆಯೋಗವು ಕೋವಿಡ್-19 ಹರಡುವಿಕೆಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಿದ್ದರು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧದಲ್ಲಿ ಕಾರ್ಖಾನೆಯ ಎಲ್ಲ ಸುಸ್ತಿದಾರ ಸದಸ್ಯರಿಗೆ ಕಳೆದ ಮಾರ್ಚ 5ರಂದು ಅಂಚೆ ಮೂಲಕ ನೋಟಿಸ್ ನೀಡಿ ಕಾರ್ಖಾನೆಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು 30 ದಿವಸಗಳೊಳಗಾಗಿ ಮರುಪಾವತಿಸಲು ಕೋರಲಾಗಿತ್ತು. ಪ್ರಸ್ತುತ ಸಹಕಾರ ಚುನಾವಣಾ ಆಯೋಗವು ದಿನಾಂಕ 08 ರಂದು ಆದೇಶವನ್ನು ನೀಡಿ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯನ್ನು ಕಳೆದ ಜುಲೈ 13 ಕ್ಕೆ ಯಾವ ಹಂತದಲ್ಲಿ ನಿಂತಿದ್ದವೋ ಅಲ್ಲಿಂದ 20ರಿಂದ45 ದಿವಸಗಳೊಳಗಾಗಿ ಚುನಾವಣೆಯನ್ನು ಪೂರ್ಣಗೊಳಿಸಲು ಆದೇಶಿಸಿದೆ.
ಈ ಆದೇಶದನ್ವಯ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯನ್ನು ದಿನಾಂಕ 20.10.2020 ರಂದು ಜರುಗಿಸಲು ಮಾನ್ಯ ಚುನಾವಣಾಧಿಕಾರಿಗಳನ್ನು ವಿನಂತಿಸಲು ನಿರ್ಣಯಿಸಲಾಗಿದೆ.
ಕಾರ್ಖಾನೆಯ ಸುಸ್ತಿದಾರ ಸದಸ್ಯರಿಗೆ ಹೆಚ್ಚಿನ ಕಾಲಾವಕಾಶ ನೀಡಲು ನಿರ್ಣಯಿಸಿದ್ದು ಸದರಿ ಚುನಾವಣೆಯಲ್ಲಿ ಮತದಾನ ಮಾಡಲು/ಭಾಗವಹಿಸಲು ಅರ್ಹತೆ ಪಡೆಯಲು ಅನುಕೂಲವಾಗುವಂತೆ ದಿನಾಂಕ 27ರ ವೇಳೆಯೊಳಗಾಗಿ ಬಾಕಿ ಇರುವ ಮೊತ್ತವನ್ನು ಕಾರ್ಖಾನೆಯ ಆಡಳಿತ ಕಛೇರಿಯಲ್ಲಿ ಪಾವತಿಸಲು ಕೋರಲಾಗಿದೆ.