ಹೊಸ ದಿಗಂತ ವರದಿ,ಬೀದರ
ಗ್ರಾಮ ಪಂಚಾಯಿತಿ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೀದರ, ಔರಾದ್ (ಬಿ) ಮತ್ತು ಕಮಲನಗರ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆದ ಮತದಾನದ ಪ್ರಮಾಣವು ಶೆ.77.98 ರಷ್ಟು ಆಗಿದೆ.
ತಾಲೂಕುವಾರು ಮತದಾನದ ವಿವರ: ಬೆಳಗ್ಗೆ 7 ರಿಂದ 9 ರವರೆಗೆ ಬೀದರ ಶೇ.3.66., ಔರಾದ್ ಬಿ ಶೆ.5.55., ಕಮಲನಗರ ಶೆ.7.22 ಸೇರಿ ಒಟ್ಟು ಶೇ.4.96 ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ 11ರವರೆಗೆ ಬೀದರ ಶೇ.22.78., ಔರಾದ್ ಬಿ ಶೇ.19.66 ಮತ್ತು ಕಮಲನಗರ ಶೇ.20.95 ಸೇರಿ ಒಟ್ಟು ಶೇ.21.52 ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬೀದರ ಶೇ.39.41., ಔರಾದ್ ಬಿ ಶೆ.34.22., ಕಮಲನಗರ ಶೆ.38.83 ಸೇರಿ ಒಟ್ಟು ಶೇ.37.84ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬೀದರನಲ್ಲಿ ಶೇ.57.46, ಔರಾದ್ ಬಿನಲ್ಲಿ ಶೆ.53.67 ಮತ್ತು ಕಮಲನಗರದಲ್ಲಿ ಶೆ.58.57 ಸೇರಿ ಶೇಕಡಾವಾರು ಒಟ್ಟು ಶೇ.56.65ರಷ್ಟು ಮತದಾನವಾಗಿದೆ.
ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಬೀದರ ತಾಲೂಕಿನಲ್ಲಿ 77.96., ಔರಾದ್ ಬಿ ತಾಲೂಕಿನಲ್ಲಿ 76.61 ಮತ್ತು ಕಮಲನಗರ ತಾಲೂಕಿನಲ್ಲಿ 79.71 ಆಗಿದ್ದು, ಮೂರು ತಾಲೂಕುಗಳು ಸೇರಿ ಒಟ್ಟು 77.98ರಷ್ಟು ಮತದಾನವಾಗಿದೆ.
ಬೀದರ, ಔರಾದ್ (ಬಿ) ಮತ್ತು ಕಮಲನಗರ ಮೂರು ತಾಲ್ಲೂಕುಗಳಲ್ಲಿನ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 509 ಮತಗಟ್ಟೆಗಳಲ್ಲಿ ನಡೆದ ಈ ಚುನಾಣೆಯಲ್ಲಿ 3389 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.