Thursday, August 11, 2022

Latest Posts

ಬೀದರ ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದ ಹಲವು ಮನೆಗಳು ನೆಲಸಮ

ಬೀದರ: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ, ಡಾವರಗಾಂವ, ಚಳಕಾಪೂರ, ಡಾವರಗಾಂವ ಮತ್ತು ತಳವಾಡ ಗ್ರಾಮಗಳು ಸೇರಿದಂತೆ ಬೀದರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದ ಬಡ ಕೂಲಿ ಕಾರ್ಮಿಕರ, ರೈತರು ಸೇರಿದಂತೆ ಹಲವು ಬಡ ಜನರ ಮನೆಗಳು ಬಿದ್ದು ಹೋಗಿವೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ, ಚಳಕಾಪೂರ, ಡಾವರಗಾಂವ, ತಳವಾಡ ಮತ್ತು ಏಣಕೂರು ಗ್ರಾಮಗಳು ಸೇರಿದಂತೆ ಬೀದರ ಜಿಲ್ಲೆಯಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಪಂಚಯ್ಯಾ ಮಠಪತಿ ಅವರು ಸೇರಿದಂತೆ ಗ್ರಾಮದಲ್ಲಿ ಅನೇಕ ಜನರ ಮನೆಗಳು ಬಿದ್ದಿವೆ.
ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಪಂಚಯ್ಯಾ ಮಠಪತಿ ಅವರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋದಲೇ ಹೇಳಿ-ಕೇಳಿ ಬಡತನದಿಂದ ನೊಂದು-ಬೆಂದು ಹೋಗಿರುವ ಕುಟುಂಬ ಇದಾಗಿದೆ. ಮಳೆಯಿಂದ ಮನೆ ಬಿದ್ದ ಕಾರಣ ಈ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮನೆ ಬಿದ್ದ ಕಾರಣ ತಲೆಯ ಮೇಲೆ ಸೂರು ಇಲ್ಲದೇ ಹೈರಾಣಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮತಿ ರೇಣುಕಾ ಅವರು ಮಾತನಾಡುತ್ತ, ಕಳೆದ ಒಂದು ವಾರದಿಂದ ಬಳುತ್ತಿರುವ ಮಳೆಯಿಂದ ಮೂರು ಕೋಣೆಗಳುಳ್ಳ ಮನೆ ಸಂಪೂರ್ಣವಾಗಿ ಬಿದ್ದು, ಹೋಗಿದ್ದು, ಈಗ ಆಸರೆ ಇಲ್ಲದೇ ನಾಲ್ಕು ಸಣ್ಣ ಸಣ್ಣ ಮಕ್ಕಳನ್ನು ಹಾಗೂ ವಯೋವೃದ್ಧ ಅಜ್ಜನೊಂದಿಗೆ ಮನೆಯ ಅಂಗಳದಲ್ಲಿ ಬದುಕು ನಡೆಸಬೇಕಾಗಿದೆ ಎಂದರು.
ಮಳೆಯಿಂದ ಮನೆ ಸ್ವಲ್ಪ-ಸ್ವಲ್ಪ ಬೀಳುತ್ತ, ಈಗ ಪೂರ್ಣವಾಗಿ ಬಿದ್ದು, ಹೋಗಿದೆ. ನಮ್ಮ ಮನೆಯರು ಲಾರಿ ಚಾಲಕರಾಗಿದ್ದು, ಮನೆಯಲ್ಲಿ ವಯಸ್ಸಾದ ಅಜ್ಜ ಹಾಗೂ ನಾಲ್ಕು ಮಕ್ಕಳ ಜೊತೆ ವಾಸ ಮಾಡುತಿದ್ದು, ಮಳೆಯಿಂದ ಮನೆ ಬಿದ್ದ ಕಾರಣ ನಾಲ್ಕು ಮಕ್ಕಳು, ವಯಸ್ಸಾದ ಅಜ್ಜನ ಜೊತೆ ತಲೆಯ ಮೇಲೆ ಆಸರೆ ಇಲ್ಲದೇ ಬದುಕಬೇಕಾಗಿದೆ ಎಂದರು.
ಶ್ರೀಮತಿ ಅಫ್ಜಲ್‍ಬೀ ಅವರು ಮಾತನಾಡುತ್ತ, ಮೋಹರ ತಿಂಗಳಲ್ಲಿ ಪೀರಗಳನ್ನು ಕೊಡಿಸುವ ಪಂಜಾಗಳು ಇಟ್ಟಿರುವ ಮನೆಯ ಗೋಡೆ ಬಿದ್ದಿದೆ. ಮನೆಯ ಗೋಡೆ ಬಿದ್ದ ಕಾರಣ ನಾಯಿಗಳು ಮನೆಯಲ್ಲಿ ನುಗ್ಗುತಿವೆ ಎಂದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಾಡರ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆಯಿಂದ ಮನೆ ಬಿದ್ದಿರುವ ಕುಟುಂಬಗಳಿಗೆ ಭೇಟಿ ಮಾಡಿ, ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss