ಬೀದರ: ಕೊರೋನಾ ಕಾಟಕ್ಕೆ ಜಿಲ್ಲೆಯಲ್ಲಿ ಗುರುವಾರ 51 ಜನರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳು ಒಟ್ಟು 4307ಕ್ಕೆ ಏರಿಕೆಯಾಗಿದೆ, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 133ಕ್ಕೇರಿದೆ, ಡಿಚ್ಶಾರ್ಜ ಆದವರು 3592, ಒಟ್ಟು ಆಕ್ಟಿವ್ ಪ್ರಕರಣಗಳು 578, 66610 ಜನರ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಪೈಕಿ 61740 ಸ್ಯಾಂಪಲ್ ನೆಗೆಟಿವ್ ಬಂದದ್ದು, ಇನ್ನೂ 563 ಜನರ ರಿಪೋರ್ಟ ಬರುವುದು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.