Sunday, August 14, 2022

Latest Posts

ಬೀದರ| ಮನೆಗೆಲಸ ಕಾರ್ಮಿಕರ ಯುನಿಯನ್‍ ನಿಂದ ಪ್ರತಿಭಟನೆ

ಬೀದರ: ಕೋವಿಡ್-19 ಕೊರೊನಾ ವೈರಸ್ ಹರಡವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಜಾರಿ ಮಾಡಿದ ಲಾಕ್‍ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಮನೆಗೆಲಸ ಮತ್ತು ಹÀಮಾಲ ಕಾರ್ಮಿಕರಿಗೆ ಕಳೆದ ಮಾರ್ಚದಿಂದ ಅಗಷ್ಟವರೆಗೆ ಪ್ರತಿ ತಿಂಗಳಿಗೆ 10,000 ರೂ. ಪರಿಹಾರ ಸೇರಿದಂತೆ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸುವಂತೆ ಬೀದರ ನಗರದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಗರ ಸಭೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ ವಸತಿ ಹೀನರಿಗೆ ವಸತಿ ಮಂಜೂರು ಮಾಡಬೇಕು, ಅಂಬೇಡ್ಕರ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಗುರುತಿನ ಚೀಟಿಗಾಗಿ ಸಲ್ಲಿಸಿದ ಕಾರ್ಮಿಕರಿಗೆ 1 ವರ್ಷವಾದರು ಸಹ ಇಲ್ಲಿಯವರೆಗೆ ನೀಡಿಲ್ಲ ಆದಷ್ಟು ಬೇಗ ಗುರುತಿನ ಚೀಟಿ ನೀಡಬೇಕು, ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಮಂಜೂರಾದ ಶೌಚಾಲಯವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಕೊಂಡ ಫಲಾನುಭವಿಗಳಿಗೆ 15,000 ರೂ. ಅನುದಾನವನ್ನು ನೀಡಬೇಕು ಮತ್ತು ಶೌಚಾಲಯ ಕಟ್ಟಿಕೊಳ್ಳುವದಕ್ಕಾಗಿ ದಿನಾಂಕ 31/08/2018, ದಿನಾಂಕಃ 13/05/2019 ಮತ್ತು ದಿನಾಂಕ 20/09/2019 ರಂದು ಸಹ ಅರ್ಜಿಗಳನ್ನು ಸಲ್ಲಿಸಿದವರಿಗೆ ಹಣ ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಪ್ರಧಾನ ಮಂತ್ರಿಯವರ 2020ರ ವರೆಗೆ ಎಲ್ಲರಿಗೂ ಸೂರು ಎನ್ನುವ ಘೋಷಣೆಯ ಸಮಯ ಮುಗಿಯುವ ಹಂತಕ್ಕೆ ಬಂದಿದೆ ಆದರೂ ಪ್ರಧಾನಮಂತ್ರಿಗಳ ಈ ಮಹತ್ವದ ಘೋೀಷಣೆಗೆ ಯಾವುದೇ ಮಹತ್ವವನ್ನು ನೀಡದೇ ದಿಕ್ಕರಿಸುತಿದ್ದಾರೆ ಆದುದರಿಂದ ಜಿಲ್ಲಾಧಿಕಾರಿ ಮುಖಾಂತರ ವಸತಿ ಸಚಿವರಿಗೆ ದಿನಾಂಕ : 24/9/2020 ರಂದು ಪ್ರತಿಭಟನೆಯ ಮೂಲಕ ನಗರ ಸಭೆಯ ಆಯುಕ್ತರಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ವಸತಿ ಮಂಜೂರು ಮಾಡುವಂತೆ ಆದೇಶ ನೀಡುವಂತೆ ಒತ್ತಾಯಿಸಲಾಗಿದೆ.

ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಗರ ಸಭೆಯ ಕಛೇರಿಯ ಮುಂದೆ ವಸತಿ ಮಂಜೂರು ಮಾಡುವವರೆಗೆ ಅಹೋರಾತ್ರಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ ಕಾರ್ಮಿಕ ಇಲಾಖೆಗೆ ಅಸಂಘಟಿತ ಕಾರ್ಮಿಕರ ಅಂಬೇಡ್ಕರ ಕಾರ್ಮಿಕ ಸಹಾಯ ಹಸ್ತದ ಅಡಿಯಲ್ಲಿ ಸ್ಮಾರ್ಟ ಕಾರ್ಡಗಾಗಿ ಅರ್ಜಿ ಸಲ್ಲಿಸಿ ಒಂದುವರೆ ವರ್ಷವಾದರೂ ಇಲ್ಲಿಯವರೆಗೆ ನೀಡದೇ ಕಾರ್ಮಿಕ ಇಲಾಖೆ ನಿದ್ದೆ ಮಾಡುತ್ತಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಾರ್ಡ ನೀಡಬೇಕು. ಈಗಾಗಲೇ ಸ್ವಚ್ಛ ಭಾರತ ಆಂದೋಲನದ ಅಡಿಯಲ್ಲಿ ವಡ್ಡರ ಕಾಲೋನಿ ಶಾಹಪೂರಗೇಟ್ ಮತ್ತು ಮೈಲೋರಿನಿಂದ ಒಟ್ಟು 180 ಅರ್ಜಿ ಸಲ್ಲಿಸಿದ ಎಲ್ಲರಿಗೂ ಶೌಚಾಲಯ ಮಂಜೂರು ಮಾಡಬೇಕು ಎಂದು ಮನೆಗೆಲಸ ಕಾರ್ಮಿಕರ ಯುನಿಯನ್ ಗೌರವಾಧ್ಯಕ್ಷರಾದ ಎಂ.ಎಸ್. ಶಿರೋಮಣಿ, ಅಧ್ಯಕ್ಷರಾದ ಶ್ರೀಮತಿ ಸವಿತಾ ಸುದೇಶ, ಕಾರ್ಯದರ್ಶಿ ಶ್ರೀಮತಿ ಸುಧಾಮಣಿ ಗೌತಮ ಗುಪ್ತಾ, ಶ್ರೀಮತಿ ಚಿತ್ರಾ ಗಾಯಕವಾಡ. ಶ್ರೀಮತಿ ನಿರ್ಮಲ ಸತ್ಯನಾರಾಯಣ ಮತ್ತು ಶ್ರೀಮತಿ ಜ್ಯೋತಿ ರವೀಂದ್ರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss