ಹೊಸದಿಗಂತ ವರದಿ, ಕೊಪ್ಪಳ
ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಗಾವತಿ ಹೋಗುವ ದಾರಿ ಮಧ್ಯದಲ್ಲಿ ಬೀದಿಬದಿ ಗೂಡಂಗಡಿಯಲ್ಲಿ ಸೀಬೆಹಣ್ಣು (ಪೇರಲೆ ಹಣ್ಣು) ಖರೀದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ರವಿವಾರ ರಾತ್ರಿ ಹೊಸಪೇಟೆಯಲ್ಲಿ ತಂಗಿದ್ದ ಡಿ.ಕೆ.ಶಿವಕುಮಾರ್ ಅವರು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರ ಮನೆಗೆ ಉಪಹಾರಕ್ಕಾಗಿ ಆಗಮಿಸಿದರು. ಆದರೆ ಅಧ್ಯಕ್ಷ ಸ್ವಾಗತಕ್ಕಾಗಿ ಗ್ರಾಮವನ್ನು ಬ್ಯಾನರ್ ಗಳ ಮೂಲಕ ಮದುವಣಿಗಿತ್ತಿಯಂತೆ ಸಿಂಗಾರ ಮಾಡಿದ್ದು ಅಷ್ಟೆ ಅಲ್ಲದೆ ಬ್ಯಾಂಡ ಭಜಂತ್ರಿ ವಾಧ್ಯಗಳ ಮೂಲಕ ಸ್ವಾಗತ ಮಾಡಲಾಯಿತು.
ಆದರೆ ಕೊರೋನಾ ನಿಯಂತ್ರಣಕ್ಕಾಗಿ ಇನ್ನೂ ಚಿಕಿತ್ಸೆ ಬಂದಿಲ್ಲ. ರಾಜ್ಯದಲ್ಲಿ ಇನ್ನೂ ಎರಡನೇ ಬಾರಿ ಕೊರೋನಾ ಬರುವ ಸಂಭವವಿದೆ. ಎಲ್ಲರೂ ಸಮಾಜಿಕ ಅಂತರ, ಮಾಸ್ಕ್ ಬಳಸಿ ಜಾಗೃತದಿಂದ ಇರಬೇಕು ಎಂದು ಸರಕಾರ ಸೂಚಿಸಿದರೂ ಇವರ ಸ್ವಾಗತದಲ್ಲಿ ಯಾವುದೇ ಮಾಸ್ಕ್ ಬಳಕೆ, ಸಮಾಜಿಕ ಅಂತರವಿಲ್ಲದೆ ಸಾವಿರಾರು ಜನರ ಗುಂಪುಗಳ ಮೂಲಕ ಸ್ವಾಗತ ಮಾಡಲಾಯಿತು.
ಆದರೆ ಗುಂಪು ಗುಂಪಾಗಿ ಸೇರಿದ್ದ ಜನರನ್ನು ಮಾಸ್ಕ್ ಹಾಕಿಕೊಳ್ಳಿ ಎಂದು ಸೂಚಿಸಲು ಮುಂದಾದವರಿಗೆ ಕೊರೋನಾಕ್ಕಾಗಿ ಇವರು ಬಂದಾಗ ಇಲ್ಲದ ನಿಯಮಗಳು ಸಾಮಾನ್ಯ ಜನರು ಹೊರಗೆ ಬಂದಾಗ ಯಾಕೆ ಕೊರೋನಾ ನಿಯಮಗಳು ಇವರಿಗೆ ಬರಲಾರದ್ದು ಕೊರೋನಾ ನಮಗೆ ಅಷ್ಟೆ ಬರುತ್ತಾ ಎಂಬದನ್ನು ಪ್ರಶ್ನಿಸುವಂತಿತ್ತು.
ಆದರೆ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಮನೆಯಲ್ಲಿ ಉಪಹಾರ ಸೇವಿಸಿ ಗಂಗಾವತಿಗೆ ಹೋಗುವ ದಾರಿ ಮದ್ಯದಲ್ಲಿ ಬೀದಿಬದಿ ಗೂಡಂಗಡಿಯಲ್ಲಿ ಸೀಬೆಹಣ್ಣು (ಪೇರಲೆ ಹಣ್ಣು) ಖರೀದಿ ಮಾಡುತ್ತಾ ಸಾಗಿದ್ದು ಎಲ್ಲರ ಗಮನ ಸೆಳೆದರು.
ಈ ಸಂರ್ದದಲ್ಲಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಶಿವರಾಜ್ ತಂಗಡಗಿ, ಶಾಸಕ ಅಮರೇಗೌಡ ಬೈಯ್ಯಾಪುರ, ಕೆ.ರಾಘವೇಂದ್ರ ಹಿಟ್ನಾಳ, ಕೆ.ರಾಜಶೇಖರ ಹಿಟ್ನಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಅನೇಕರು ಭಾಗವಹಿಸಿದ್ದರು.