ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬುರೆವಿ ಚಂಡಮಾರುತದ ಪ್ರಭಾವಕ್ಕೆ ತಮಿಳುನಾಡಿನಲ್ಲಿ ಸತತ ಎರಡನೇ ದಿನವೂ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ 7 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಬುರೆವಿ ಆರ್ಭಟಕ್ಕೆ ಪೂರ್ತಿ ತಮಿಳುನಾಡೆ ಬೆಚ್ಚಿಬಿದ್ದಿದೆ. ಒಂದೇ ಸಮನೆ ಗಾಳಿ, ಮಳೆ ಆಗುತ್ತಿದ್ದು, ಕಡಲೂರ್ ಜಿಲ್ಲೆಯಲ್ಲಿ ಸುಮಾರು 300 ಗ್ರಾಮಗಳು ಜಲಾವೃತವಾಗಿದೆ. ಇಲ್ಲಿನ 66000 ಜನರನ್ನು ಪುನವರ್ಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಮೂರಾಬಟ್ಟೆಯಾಗಿದೆ.
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ನೆರವು ನೀಡುವುದಾಗಿ ಮತ್ತು ಜಾನುವಾರುಗಳನ್ನು ಕಳೆದುಕೊಂಡವರಿಗೂ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಘೋಷಿಸಿದ್ದಾರೆ.