ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಗಲ್ಫ್ ಫ್ರೆಂಡ್ಸ್ ಆಯೋಜಕತ್ವದಲ್ಲಿ ಮಾ. 6 ಮತ್ತು 7 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಬುರ್ಜ್ ಅಲ್ ಸಾಹಿಲ್ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನ್ಮೆಂಟ್- 2021 ನಡೆಯಿತು.
ಜಿಲ್ಲೆಯ ಹಲವು ಪ್ರಸಿದ್ಧ ತಂಡಗಳು ಭಾಗವಹಿಸಿದ್ದ ಈ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಡಿವಿಶ್ ಸ್ಟಾರ್ ಶಾಂತಿ ಅಂಗಡಿ ಜಯಶಾಲಿಯಾದರೆ, ಸಜಿಪದ ಸಿಟಿ ಬಾಯ್ಸ್ ತಂಡ ರನ್ನರ್ ಅಪ್ ಆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಉದ್ಯಮಿ ಮಾಧವ ಮಾವೆ, ಮಂಗಳೂರು ಮನಪಾ ಸದಸ್ಯೆ ಗಾಯತ್ರಿ ರಾವ್, ಸೂರ್ಯವಂಶ ಫೌಂಡರ್ ಗೋವರ್ಧನ್ ರಾವ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ನಾಲ್ವರು ಯೋಧರಿಗೆ ಸನ್ಮಾನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸ್ಮರಣಿಕೆ ನೀಡಲಾಯಿತು.
ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಕೊಳ್ನಾಡು ಗ್ರಾಮ ಪಂಚಾಯಿತ್ ಸದಸ್ಯ ಮಹಮ್ಮದ್ ಮಂಚಿ ನೇತೃತ್ವದ ಯುವಕರ ಪಡೆ ಈ ಕ್ರೀಡಾಕೂಟವನ್ನು ನಿರ್ವಹಿಸಿದ್ದು ಸೌದಿ ಅರೇಬಿಯಾದ ಬುರ್ಜ್ ಅಲ್ ಸಾಹಿಲ್ ಸಂಸ್ಥೆಯ ಮುಖ್ಯಸ್ಥ ನಿಸಾರ್ ಮಂಚಿ ಈ ಕ್ರೀಡಾಕೂಟ ದೊಡ್ಡ ಮಟ್ಟದಲ್ಲಿ ನಡೆಯಲು ಸಹಕಾರಿಯಾದರು.
ಪ್ರಥಮ ರೂ. 50 ಸಾವಿರ ಹಾಗೂ ಟ್ರೋಫಿ, ದ್ವಿತೀಯ ರೂ. 25 ಸಾವಿರ ಹಾಗೂ ಟ್ರೋಫಿ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.