Saturday, July 2, 2022

Latest Posts

ಬೃಹತ್ ಡ್ರಗ್ಸ್ ಜಾಲ ಭೇದಿಸಿದ ಎಟಿಎಸ್: 13 ಮಂದಿ ಅಂದರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ  ೫೮ ಕೋಟಿ ರೂ. ಮೌಲ್ಯದ ೧೪೬ ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವ ಮೂಲಕ ಬೃಹತ್ ಜಾಲವನ್ನು ಭೇದಿಸಿದ್ದಾರೆ.
ಇನ್ನು ಕೃತ್ಯದಲ್ಲಿ ಭಾಗಿಯಾಗಿರುವ ೧೩ ಜನರನ್ನು ಬಂಧಿಸಿದ್ದು, ಅಬ್ದುಲ್ ರಝಾಕ್ ಖಾದರ್ ಶೇಕ್ , ಜಿತೇಂದ್ರ ಶರದ್ ಪವಾರ್, ನರೇಶ್ ಮದನ್ ಮಸ್ಕರ್, ಸರ್ದಾರ್ ಉತ್ತಮ್ ಪಾಟೀಲ್, ಜುಬೈರ್ ಲಾಲ್ ಮೊಹಮ್ಮದ್, ಮೊಹಮ್ಮದ್ ಸಲೀಂ ಅಬ್ದುಲ್ ಹಮೀದ್, ಸುರೇಶ್ ಸಿದ್ದಿಕಿ, ವಾಸಿಮ್ ಅಬ್ದುಲ್ ಲತೀಫ್ ಶೇಖ್, ಅವೇಶ್ ಅಕ್ಬರ್ ಖಾನ್, ಮೊಹಮ್ಮದ್ ತನ್ವೀರ್ ಅಬ್ದುಲ್ , ಮೊಹಮ್ಮದ್ ವಾಸಿಮ್ ಅಬ್ದುಲ್ ಲತೀಫ್ ಶೇಖ್, ಮುಸ್ತಫಾ ಜುಲ್ಫಿಕರ್ ಚರಣಿಯಾ ಮತ್ತು ಮೊಹಮ್ಮದ್ ಅಬ್ದುಲ್ ಬಂಧಿತ ಆರೋಪಿಗಳು.
ಈ ಆರೋಪಿಗಳಿಂದ ಬ್ಯಾಂಕ್ ಖಾತೆಗಳಿಂದ ಹಣ ಮತ್ತು ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಕುರಿತು ಮುಂಬೈ ಭಯೋತ್ಪಾದನಾ ನಿಗ್ರಹ ದಳವು ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss