ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆ.12,13,17 ಮತ್ತು 19ರಂದು ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿ ಎಂದು ಬೆಸ್ಕಾಂ ಹೇಳಿದೆ.
ಫೆ. 12 ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಈ ಭಾಗಗಳಲ್ಲಿ…
ಇಮ್ಮದಿಹಳ್ಳಿ ಮುಖ್ಯ ರಸ್ತೆ, ವಿ.ಎಸ್.ಆರ್. ಬಡಾವಣೆ, ಒ.ಪಿ.ಎಚ್. ರಸ್ತೆ, 3ಜಿ ಹೋಮ್ಸ್, ಕೊಂಬೆನ ಅಗ್ರಹಾರ, ಬಿಪಿಎಲ್ ಕ್ರಾಸ್, ಜಿ.ಆರ್. ಟೆಕ್ ಪಾರ್ಕ್, ಎಂ.ಜೆ.ಆರ್. ಪೀರ್ ಅಪಾರ್ಟ್ಮೆಂಟ್, ವಿಜಯನಗರ, ಮೈತ್ರಿ ಬಡಾವಣೆ, ವೈಟ್ಫೀಲ್ಡ್ ಮುಖ್ಯ ರಸ್ತೆ,ಶಂಕರಪುರ, ಕಾಡುಗೋಡಿ, ಚನ್ನಸಂದ್ರ, ಸಪ್ತಗಿರಿ ಬಡಾವಣೆ, ಗಾಂಧಿಪುರ, ಹಗದೂರು, ಇಸಿಸಿ ರಸ್ತೆ, ಪ್ರಶಾಂತ ಬಡಾವಣೆ, ಬಾಲಾಜಿ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶ.
ಫೆ. 13 ರಂದು ಬೆಳಗ್ಗೆ 11ರಿಂದ ಸಂಜೆ 3ರವರೆಗೆ ಈ ಭಾಗಗಳಲ್ಲಿ…
ಸಂತೋಷ್ ಟವರ್, ಎಸ್.ಜೆ.ಆರ್. ಟೆಕ್ ಪಾರ್ಕ್, ಶೈಲೇಂದ್ರ ಟೆಕ್ ಪಾರ್ಕ್ ಸುತ್ತ-ಮುತ್ತಲಿನ ಪ್ರದೇಶ.
ಫೆ. 17 ಮತ್ತು 19 ರಂದು ಬೆಳಗ್ಗೆ 10.30ರಿಂದ ಸಂಜೆ 6. 30ರವರೆಗೆ ಈ ಭಾಗಗಳಲ್ಲಿ…
ಡಾಲರ್ಸ್ ಕಾಲೊನಿ, 100 ಅಡಿ ವರ್ತುಲ ರಸ್ತೆಯ ಸುತ್ತ-ಮುತ್ತ, ಜಯನಗರದ ಉಪವಿಭಾಗದ ಜೆ.ಪಿ. ನಗರ, ದಾಲ್ಮಿಯಾ ಸಿಗ್ನಲ್ ಗಳಲ್ಲಿ 2 ದಿನವೂ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಸ್ಕಾ ತಿಳಿಸಿದೆ.