ಬೆಂಗಳೂರು: ಲಂಡನ್ನಲ್ಲಿ ನೆಲೆಸಿದ್ದ 343 ಭಾರತೀಯರು ಸೋಮವಾರ ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು.
ಇಂಡಿಯನ್ ಏರ್ಲೈನ್ಸ್ ವಿಮಾನದಲ್ಲಿ ಪ್ರಯಾಣಿಸಿದ ಎಲ್ಲರನ್ನೂ 14 ದಿನಗಳ ಕಾಲ ಹೋಟೆಲ್ಗಳಲ್ಲಿ ಕ್ವಾರಂಟೈನ್ನಲ್ಲಿಡಲಾಗುವುದು. ಹದಿನಾರು ಬಿಎಂಟಿಸಿ ಬಸ್ಗಳಲ್ಲಿ ಲಂಡನ್ನಿಂದ ಬಂದಿಳಿದ ಎಲ್ಲರನ್ನೂ ನಗರದ ಕೆಲ ಪ್ರತಿಷ್ಠಿತ ಹೋಟೆಲ್ಗಳಿಗೆ ತೆರಳಿಸಲಾಗಿದೆ.
ಲಾಕ್ಡೌನ್ ಘೋಷಣೆಯಾದ ನಂತರ ವಿದೇಶದಿಂದ ನಗರಕ್ಕೆ ಬಂದ ಪ್ರಮುಖ ಭಾರತೀಯರ ತಂಡ ಇದಾಗಿದೆ. ವಿಮಾನ ಬಂದಿಳಿದ ಕೂಡಲೇ ಬಿಐಎಎಲ್ ಸಿಬ್ಬಂದಿ ಸೋಂಕು ನಿವಾರಣೆಯ ಎಲ್ಲ ಕ್ರಮಗಳನ್ನೂ ಅನುಸರಿಸಿತು. ಅಲ್ಲದೆ ಪ್ರತಿಯೊಬ್ಬ ಪ್ರಯಾಣಿಕನನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಯಿತು.
Karnataka: More than 300 Indians returned to Bengaluru from London, UK, on an Air India special flight early morning today. #VandeBharatMission pic.twitter.com/S3wffvL1ul
— ANI (@ANI) May 11, 2020